varthabharthi

ಕ್ರೀಡೆ

ಅಮೋಳ್ ಮುಝುಂದಾರ್ ಆಫ್ರಿಕದ ಬ್ಯಾಟಿಂಗ್ ಕೋಚ್

ವಾರ್ತಾ ಭಾರತಿ : 10 Sep, 2019

   ಹೊಸದಿಲ್ಲಿ, ಸೆ. 9: ಮುಂಬೈನ ಬ್ಯಾಟ್ಸ್‌ಮನ್ ಅಮೋಳ್ ಮುಝುಂದಾರ್ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಭಾರತ ಮತ್ತು ದ.ಆಫ್ರಿಕ ತಂಡಗಳ ನಡುವೆ ಟೆಸ್ಟ್ ಸರಣಿ ಅಕ್ಟೋಬರ್ 2ರಂದು ಆರಂಭಗೊಳ್ಳಲಿದ್ದು, ಭಾರತದ ನೆಲದಲ್ಲಿ ಭಾರತವನ್ನು ಕಟ್ಟಿ ಹಾಕಲು ಆಫ್ರಿಕ ಮುಝುಂದಾರ್ ಮಾರ್ಗದರ್ಶನದಲ್ಲಿ ತಯಾರಿ ನಡೆಸಲಿದೆ.

44ರ ಹರೆಯದ ಮುಝುಂದಾರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 48.13 ಸರಾಸರಿಯಂತೆ 11, 167 ರನ್ ದಾಖಲಿಸಿದ್ದಾರೆ. ಆದರೆ ಅವರಿಗೆ ಒಮ್ಮೆಯೂ ಟೀಮ್ ಇಂಡಿಯಾದ ಪರ ಆಡಲು ಅವಕಾಶ ಸಿಕ್ಕಿಲ್ಲ. ಮುಝುಂದಾರ್ ತಮ್ಮ ನೇಮಕಾತಿಯನ್ನು ದೃಢಪಡಿಸಿದ್ದಾರೆ. ಕಳೆದ ವಾರ ದಕ್ಷಿಣ ಆಫ್ರಿಕ ತಂಡದ ಸಂಬಂಧಪಟ್ಟವರನ್ನು ಭೇಟಿಯಾಗಿದ್ದೆ. ಹೊಸ ಸವಾಲನ್ನು ಸ್ವೀಕರಿಸಿದ್ದೇನೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿದೇಶ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ಮುಝುಂದಾರ್ ಹೇಳಿದ್ದಾರೆ.

ಮುಝುಂದಾರ್ ಕ್ರಿಕೆಟ್‌ನಲ್ಲಿ ತಮ್ಮ ಬಹುಪಾಲು ವರ್ಷಗಳನ್ನು ಮುಂಬೈ ತಂಡದಲ್ಲಿ ಕಳೆದಿದ್ದರು. ಬಳಿಕ ಅಸ್ಸಾಂ ತಂಡ ಸೇರ್ಪಡೆಗೊಂಡಿದ್ದರು.

ಮುಝುಂದಾರ ಲೀಸ್ಟ್ ಎ ಕ್ರಿಕೆಟ್‌ನಲ್ಲಿ 3,286 ರನ್ ಗಳಿಸಿದ್ದರು. ಐಪಿಎಲ್ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)