varthabharthi

ಕರ್ನಾಟಕ

ವರ್ಗಾವಣೆಯಾದರೂ ಅತಂತ್ರ ಸ್ಥಿತಿಯಲ್ಲಿರುವ ಸಿ, ಡಿ ಗ್ರೂಪ್‌ ನೌಕರರು

ವಾರ್ತಾ ಭಾರತಿ : 10 Sep, 2019

ಬೆಂಗಳೂರು, ಸೆ.10: ಸರಕಾರದ ವಿವಿಧ ಇಲಾಖೆಯಲ್ಲಿನ ಸಿ ಮತ್ತು ಡಿ ಗ್ರೂಪ್‌ನ 20 ಕ್ಕೂ ಅಧಿಕ ನೌಕರರು ಜುಲೈನಲ್ಲಿ ವರ್ಗಾವಣೆಯಾದರೂ ಇದುವರೆಗೂ ಅವರ ಇಚ್ಛೆಪಟ್ಟ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಚಾಲಕರು, ಗುಮಾಸ್ತರು, ಅಧೀಕ್ಷಕ ಹುದ್ದೆಯಲ್ಲಿರುವವರು ಜೂನ್ ಅಂತ್ಯ ಹಾಗೂ ಜುಲೈ ಆರಂಭದಲ್ಲಿ ಕೋರಿಕೆ ಮೇಲೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಖಾಲಿಯಿರುವ ಹುದ್ದೆಗೆ ವರ್ಗಾಯಿಸುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಸರಕಾರವೂ ಮಾನ್ಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕುಟುಂಬಗಳನ್ನು ಬದಲಾಗಬಹುದಾದ ಸ್ಥಳಕ್ಕೆ ವರ್ಗಾಯಿಸಿ ತಾವೂ ವರ್ಗಾವಣೆಗೊಂಡ ಸ್ಥಳಕ್ಕೆ ತೆರಳಬೇಕಿತ್ತು. ಇದರ ನಡುವೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಹೊಸ ಸರಕಾರ ರಚನೆಯಾಯಿತು. ಈ ವೇಳೆ ನೂತನ ಸಿಎಂ ಜುಲೈನಲ್ಲಿ ಅನುಮೋದನೆಗೊಂಡ ಎಲ್ಲ ವರ್ಗಾವಣೆಗಳ ಆದೇಶಗಳನ್ನು ತಡೆ ಹಿಡಿದರು. ಹೀಗಾಗಿ, ವರ್ಗಾವಣೆಯಾಗಿದ್ದ ಎಲ್ಲರೂ ಈಗ ತಮ್ಮ ವರ್ಗಾವಣೆ ಚಾಲನಾ ಆದೇಶ ಕೊಡಿಸಲು ವಿಧಾನಸೌಧದ ಕಾರಿಡಾರ್‌ನಲ್ಲಿ ಅಲೆಯುವಂತಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)