varthabharthi

ಅಂತಾರಾಷ್ಟ್ರೀಯ

100ಕ್ಕೂ ಅಧಿಕ ಜನರಿಗೆ ಗಾಯ

ಆಶುರಾ ಆಚರಣೆ ವೇಳೆ ಕಾಲ್ತುಳಿತ: 31 ಮಂದಿ ಮೃತ್ಯು

ವಾರ್ತಾ ಭಾರತಿ : 10 Sep, 2019

ಕೆರ್ಬಲ,ಸೆ.10: ಇರಾಕ್‌ನ ಕರ್ಬಲಾ ನಗರದಲ್ಲಿ ಆಶುರ ಆಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಟ 31 ಮಂದಿ ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಶುರ ಮೆರವಣಿಗೆ ಕಾಲ್ಸೇತುವೆಯ ಮೇಲೆ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಪ್ರತಿವರ್ಷ ಬಗ್ದಾದ್‌ ನಿಂದ 80ಕಿ.ಮೀ ದೂರವಿರುವ ಪವಿತ್ರ ಕೆರ್ಬಲಾ ನಗರದಲ್ಲಿ ಲಕ್ಷಾಂತರ ಜನರು ಈ ದಿನ ಜಮಾವಣೆಗೊಳ್ಳುತ್ತಾರೆ. ಮಧ್ಯಾಹ್ನದ ವೇಳೆ ಸಾವಿರಾರು ಜನರು ಕೆರ್ಬಲಾದಲ್ಲಿರುವ ಇಮಾಮ್ ಹುಸೈನ್ ಅವರ ಸಮಾಧಿಯತ್ತ ಓಡುತ್ತಾರೆ. ಇದಕ್ಕೂ ಮೊದಲು ಕರ್ಬಲಾದಲ್ಲಿ ಹೆಚ್ಚಿನ ಭದ್ರತೆಯ ಮಧ್ಯೆ ಲಕ್ಷಾಂತರ ಜನರು ಅಶುರ ಮೆರವಣಿಗೆ ನಡೆಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)