varthabharthi

ಕ್ರೀಡೆ

ಐಪಿಎಲ್ ಮಾಜಿ ಕ್ರಿಕೆಟಿಗ ಥೆರಾನ್ ಅಮೆರಿಕ ತಂಡಕ್ಕೆ ಸೇರ್ಪಡೆ

ವಾರ್ತಾ ಭಾರತಿ : 10 Sep, 2019

ನ್ಯೂಯಾರ್ಕ್, ಸೆ.10: ದಕ್ಷಿಣ ಆಫ್ರಿಕದ ಮಾಜಿ ವೇಗದ ಬೌಲರ್ ರಸ್ಟಿ ಥೆರಾನ್ ಅಮೆರಿಕ ಕ್ರಿಕೆಟ್ ತಂಡವನ್ನು ಸೇರ್ಪಡೆಯಾಗಿದ್ದಾರೆ. ಫ್ಲೋರಿಡಾದಲ್ಲಿ ನಡೆಯುವ ಪಪುವಾ ನ್ಯೂಗಿನಿ ಹಾಗೂ ನಮೀಬಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಅಮೆರಿಕದ ಪರ ಆಡಲಿದ್ದಾರೆ.

ಥೆರಾನ್ ಈ ಹಿಂದೆ 2010 ಹಾಗೂ 2012ರ ನಡುವೆ ದಕ್ಷಿಣ ಆಫ್ರಿಕದ ಪರ ನಾಲ್ಕು ಏಕದಿನ ಹಾಗೂ 9 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್, ಡೆಕ್ಕನ್ ಚಾರ್ಜರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಮೈಕಾ ತಲ್ಲಾವಾಸ್ ತಂಡದ ಪರ ಆಡಿದ್ದರು.

34ರ ಹರೆಯದ ಥೆರಾನ್ 2017ರಲ್ಲಿ ಅರೇಬಿಯನ್ ಕ್ರಿಕೆಟ್ ಕಾರ್ನಿವಾಲ್‌ನಲ್ಲಿ ಕುಬೈಟ್ ಕ್ರೂಸಡೆರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)