varthabharthi

ಕರಾವಳಿ

ಉಚಿತ ಕಣ್ಣಿನ ದೃಷ್ಠಿ- ಚರ್ಮರೋಗ ತಪಾಸಣಾ ಶಿಬಿರ

ವಾರ್ತಾ ಭಾರತಿ : 11 Sep, 2019

ಉಡುಪಿ, ಸೆ.11: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ಮತ್ತು ಬ್ರಹ್ಮಾವರ, ವಿಶ್ವಭಾರತಿ ಅಸೋಸಿಯೇಶನ್, ಚಿಟ್ಪಾಡಿ ಗಣೇಶೋತ್ಸವ ಸಮಿತಿ ಮತ್ತು ಬೀಡಿನಗುಡ್ಡೆ ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ದೃಷ್ಠಿ ಪರೀಕ್ಷೆ ಮತ್ತು ಚರ್ಮ ರೋಗ ತಪಾಸಣಾ ಶಿಬಿರವನ್ನು ಸೆ.10ರಂದು ಚಿಟ್ಪಾಡಿ ಶ್ರೀಶಾರದಾಂಬ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಚರ್ಮ ರೋಗ ಮುಖ್ಯಸ್ಥ ಡಾ.ಸತೀಶ ಪೈ ಮಾತನಾಡಿ, ಚರ್ಮ ರೋಗ ಮಳೆಗಾಲದಲ್ಲಿ ಹೆಚ್ಚು ಕಂಡು ಬರುತ್ತದೆ. ಈ ಕಾಯಿಲೆ ಅಪಾಯಕಾರಿಯಾಗಿದ್ದು, ಯಾರು ಕೂಡ ಮುಚ್ಚುಮರೆ ಇಲ್ಲದೆ ವೈದ್ಯರ ಬಳಿ ಹೇಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನೇತ್ರ ತಜ್ಞ ಡಾ.ಅವಿನಾಶ ಪ್ರಭು ಕಣ್ಣಿನ ಪರೀಕ್ಷೆ ನೆಡಸಿಕೊಟ್ಟರು. ಜಯಂಟ್ಸ್ ಮಾಜಿ ರಾಜ್ಯಾಧ್ಯಕ್ಷ ಮಧುಸೂಧನ್ ಹೆರೂರು, ಉಡುಪಿ ಜಯಂಟ್ಸ್ ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರ್, ಬ್ರಹ್ಮವರ ಗ್ರೂಪ್ ಅಧ್ಯಕ್ಷ ಸುಂದರ ಪೂಜಾರಿ, ನಗರಸಭೆ ಮಾಜಿ ಸದಸ್ಯ ಶ್ಯಾಮ ಪ್ರಸಾದ್ ಕುಡ್ವ, ರವಿನಾಥ ಪೈ, ಯಶವಂತ ಸಾಲಿಯಾನ್, ಸತೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ದೇವದಾಸ್ ಕಾಮತ್ ಸ್ವಾಗತಿಸಿದರು. ರಾಘ ವೇಂದ್ರ ಪ್ರಭು ಕರ್ವಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ನೂರಾರು ಮಂದಿಗೆ ಪ್ರಧಾನ ಮಂತ್ರಿ ಭಾರತೀಯ ಜನ ಔಷದ ಕೇಂದ್ರ ಬ್ರಹ್ಮಾವರ ಮತ್ತು ಕೆಎಂಸಿ ಆಸ್ಪತ್ರೆಯಿಂದ ಉಚಿತ ಔಷದವನ್ನು ವಿತರಿಸ ಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)