varthabharthi


ಕರ್ನಾಟಕ

ಮೋಟಾರು ವಾಹನ ಕಾಯ್ದೆ

ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಮೊತ್ತ ಕಡಿತಗೊಳಿಸಲಿರುವ ರಾಜ್ಯ ಸರಕಾರ ?

ವಾರ್ತಾ ಭಾರತಿ : 11 Sep, 2019

ಬೆಂಗಳೂರು, ಸೆ.11: ಹೊಸದಾಗಿ ಬಂದಿರುವ ಮೋಟಾರು ವಾಹನ ಕಾಯ್ದೆಯು ದೇಶದೆಲ್ಲೆಡೆ ಭಾರೀ ಸಂಚಲನ ಮೂಡಿಸಿದ್ದು, ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ದುಬಾರಿ ದಂಡ ತೆರಬೇಕಾದ ಹಿನ್ನೆಲೆ ವಾಹನ ಸವಾರದಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಆದರೆ ಕೇಂದ್ರ ಸರ್ಕಾರದ ಈ ಹೊಸ ವಾಹನ ಕಾಯ್ದೆ ಸವಾರರಿಗೆ ಹೊರೆಯಾದ ಹಿನ್ನಲೆಯಲ್ಲಿ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಕಡಿತಗೊಳಿಸಿದ್ದು, ಇದರ ಬೆನ್ನಿಗೇ ದಂಡ ಮೊತ್ತ ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ದೇಶದೆಲ್ಲೆಡೆ ಈಗಾಗಲೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರಿಗೆ ಸಾವಿರಾರು ರೂ. ದಂಡ ವಿಧಿಸಿದ ಬಗ್ಗೆ ವರದಿಯಾಗಿದೆ. ಹೀಗಾಗಿ ಗುಜರಾತ್ ಸರ್ಕಾರ ತೆಗೆದ ನಿರ್ಧಾರದಂತೆಯೇ ಕರ್ನಾಟಕ ಸರ್ಕಾರವು ಕೂಡಾ ದಂಡ ಕಡಿತಗೊಳಿಸುವ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)