varthabharthi

ಬೆಂಗಳೂರು

ನಾಲ್ವರು ಐಎಎಸ್ ಅಧಿಕಾರಿಗಳ ವರ್ಗಾವಣೆ

ವಾರ್ತಾ ಭಾರತಿ : 11 Sep, 2019

ಬೆಂಗಳೂರು, ಸೆ.11: ರಾಜ್ಯ ಸರಕಾರವು ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ.

ಮೈಸೂರಿನ ಆಡಳಿತ ಸುಧಾರಣೆ ಹಾಗೂ ತರಬೇತಿ ಕೇಂದ್ರದ ಪ್ರಧಾನ ನಿದೇರ್ಶಕ-ಮುನೀಶ್ ಮೌದ್ಗಿಲ್, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಎನ್.ಜಯರಾಮ್‌ರನ್ನು ವರ್ಗಾವಣೆ ಮಾಡಲಾಗಿದೆ.

ಸರ್ವೇ, ಭೂ ದಾಖಲೆಗಳ ಆಯುಕ್ತ-ಡಾ.ಎಂ.ಟಿ.ರೇಜು ಹಾಗೂ ಬಿಎಂಆರ್‌ಡಿಎ ಮೆಟ್ರೋಪಾಲಿಟನ್ ಆಯುಕ್ತರನ್ನಾಗಿ ವಿ.ಪಿ.ಇಕ್ಕೇರಿಯವರನ್ನು ವರ್ಗಾವಣೆ ಮಾಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)