varthabharthi

ಬೆಂಗಳೂರು

ಜಾತಿ ಗುರಾಣಿ ಬಳಸಿದರೆ ಸತ್ಯ ಗೆಲ್ಲದು: ನಟ ಜಗ್ಗೇಶ್

ವಾರ್ತಾ ಭಾರತಿ : 11 Sep, 2019

ಬೆಂಗಳೂರು, ಸೆ.11: ದೇಶದ ಸಂವಿಧಾನ, ಕಾನೂನು, ಜಾತಿ ಧರ್ಮ, ಮತ ಪಂಥ ಜನಾಂಗ, ಬಡವ ಬಲ್ಲಿದನ ಮೀರಿದ್ದು. ಸತ್ಯಕ್ಕೆ ಜಯ, ಅಸತ್ಯಕ್ಕೆ ಅಪಜಯ. ನಾವು ನಮ್ಮ ಸತ್ಯ, ಅಸತ್ಯ ನಿರೂಪಿಸಬೇಕು. ಜಾತಿಗಳನ್ನು ಗುರಾಣಿಯಾಗಿ ಬಳಸಬಾರದು. ರಾಜಕೀಯಕ್ಕಾಗಿ ಜಾತಿಯನ್ನು ಗುರಾಣಿಯಾಗಿ ಬಳಸಿದರೆ ಸತ್ಯ ಗೆಲ್ಲದು. ಬದಲಿಗೆ ಜಾತಿ ವೈಷಮ್ಯಕ್ಕೆ ದಾರಿ ಎಂದು ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಮುಂದೊಂದು ದಿನ ಇಂದಿನ ಜಾತಿವ್ಯವಸ್ಥೆ ತೊಲಗಿ ಹೊಸ ಜಾತಿ ಹುಟ್ಟುವುದು, ಅದು ಬಡವನ ಕೈ ಹಿಡಿದು ಎತ್ತುವ ಶ್ರೇಷ್ಠ ಮನುಷ್ಯನ ಜಾತಿ. ನನ್ನ ಪ್ರಕಾರ ಇರುವುದು ಎರಡೆ ಜಾತಿ, ಗಂಡುಹೆಣ್ಣು, ಬಡವಬಲ್ಲಿದ ಎಂದು. ಈ ಎರಡು ಜಾತಿಗೆ ಸಮಾನತೆ ಸಿಗುತ್ತದೆ. ಆಗ ನಮ್ಮ ಭಾರತ ಶ್ರೀಮಂತ ರಾಷ್ಟ್ರ ಆಗುತ್ತದೆ. ಆ ದಿನಕ್ಕೆ ಆಶಾಭಾವನೆಯಿಂದ ಕಾಯುವೆ ಎಂದು ಜಗ್ಗೇಶ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)