varthabharthi

ಕರಾವಳಿ

ದೇಶಪ್ರೇಮ, ಸಾಮಾಜಿಕ ಕಾಳಜಿಯುಳ್ಳ ಶಿಕ್ಷಣ ಅಗತ್ಯ: ಕೋಟ ಶ್ರೀನಿವಾಸ್ ಪೂಜಾರಿ

ವಾರ್ತಾ ಭಾರತಿ : 11 Sep, 2019

ಉಡುಪಿ, ಸೆ.11: ಶಿಕ್ಷಣದ ಗುರಿ ಕೇವಲ ಜ್ಞಾನ ಸಂಪಾದನೆಗೆ ಸೀಮಿತ ವಾಗಿರಬಾರದು. ದೇಶಪ್ರೇಮ, ನೈತಿಕ ಮೌಲ್ಯ ಮತ್ತು ಸಾಮಾಜಿಕ ಕಾಳಜಿ ಯಿಲ್ಲದ ಶಿಕ್ಷಣ ದುರಂತಕ್ಕೆ ಕಾರಣವಾಗಬಹುದು ಎಂದು ರಾಜ್ಯ ಬಂದರು ಮೀನುಗಾರಿಕೆ ಹಾಗು ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ರೇಂಜರಿಂಗ್ ಶತಮಾನೋತ್ಸವ, ರೋವರ್ಸ್‌-ರೇಂಜರ್ಸ್‌ ಮೂಟ್ ಮತ್ತು ರೋವರ್ ಸ್ಕೌಟ್ ಲೀಡರ್ -ರೇಂಜರ್ ಲೀಡರ್‌ಗಳ ಸಮಾವೇಶದಲ್ಲಿ ರವಿವಾರ ಭಾವಹಿಸಿ ಅವರು ಮಾತನಾಡುತಿದ್ದರು.

ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಅಗತ್ಯ ನೆರವನ್ನು ಸರಕಾರ ನೀಡಲಿದೆ ಎಂದು ಅವರು ತಿಳಿಸಿದರು.

ಐ.ಕೆ.ಜಯಚಂದ್ರ, ಜ್ಯೋತಿ ಪ್ರಭಾಕರ್ ಭಟ್, ಬಿ.ವಿ.ರಾಮಲತಾ, ರಾಧಾ ವೆಂಕಟೇಶ್, ಜಾನಕಿ ವೇಣುಗೋಪಾಲ್ ಮೊದಲಾದವರು ಉಪಸ್ಥಿತ ರಿದ್ದರು. ಸ್ಕೌಟ್ಸ್ ಆಯುಕ್ತ ಡಾ.ವಿಜೇಂದ್ರ ವಸಂತ್ ಸ್ವಾಗತಿಸಿದರು. ಕಾರ್ಯ ಕ್ರಮ ಸಂಘಟಕ ಡಾ.ಜಯರಾಮ್ ಶೆಟ್ಟಿಗಾರ್ ವಂದಿಸಿದರು. ಆನಂದ ಅಡಿಗ ಕಾರ್ಯಕ್ರವು ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)