varthabharthi

ಕರಾವಳಿ

ಸೆ.12: ಮಂಗಳೂರು ವಿ.ವಿ. ಸಂಸ್ಥಾಪನಾ ದಿನಾಚರಣೆ

ವಾರ್ತಾ ಭಾರತಿ : 11 Sep, 2019

ಮಂಗಳೂರು, ಸೆ.11:ಮಂಗಳೂರು ವಿಶ್ವ ವಿದ್ಯಾನಿಲಯದ 40ನೆ ಸಂಸ್ಥಾಪನಾ ದಿನಾಚರಣೆ ಸೆ.12ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಸಭಾಭವನದಲ್ಲಿ ನಡೆಯಲಿದೆ ಎಂದು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 6 ಮಂದಿ ಸಾಧಕರನ್ನು ಗೌರವಿಸಲಾಗುವುದು. ಚಿದ್ವಿಲಾಸ್(ಮಾಧ್ಯಮ ),ಡಾ.ಗೋಪಾಲ ಮುಗೆರಾಯ (ತಂತ್ರಜ್ಞಾನ),ಡಾ.ಗಣೇಶ್ ಅಮೀನ್ ಸಂಕಮಾರ್(ಜನಪದ ಕ್ಷೇತ್ರದ ಸಂಶೋಧನೆ),ಅಭಯ ಸಿಂಹ (ಚಲನಚಿತ್ರ ನಿರ್ದೇಶನ), ಪಿ.ಕೆ.ದೇವರಾಯ (ಕೃಷಿ ಸಾಧಕ),ಡಾ.ಶಶಿಕಲಾ ಗುರುಪುರ(ಕೃಷಿ ಕ್ಷೇತ್ರ) ಮೊದಲಾದವರು ಸನ್ಮಾನ ಪಡೆಯುವ ಸಾಧಕರಗಿದ್ದಾರೆ.

ಸಮಾರಂಭದಲ್ಲಿ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಪಿವಿ.ಕೃಷ್ಣ ಭಟ್, ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಎನ್.ಆರ್.ಶೆಟ್ಟಿ, ವಿಶ್ರಾಂತ ಕುಲಪತಿಗಳಾದ ಬಿ.ಹನುಮಯ್ಯ, ಕೆ.ಭೈರಪ್ಪ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರೊ.ಪಿ.ಎಸ್.ಎಡಪಡಿತ್ತಾಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿಶ್ವ ವಿದ್ಯಾನಿಲಯದ ಕುಲಸಚಿವ ಎ.ಎಂ.ಖಾನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಮಾಜಿ ಕುಲಪತಿ ಶಿವಲಿಂಗಯ್ಯ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)