varthabharthi

ಕರಾವಳಿ

ವೇಶ್ಯಾವಾಟಿಕೆ ದಂಧೆ ಆರೋಪ: ಮೂವರ ಬಂಧನ

ವಾರ್ತಾ ಭಾರತಿ : 11 Sep, 2019

ಪುತ್ತೂರು : ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶವಾದ ಅರಿಯಡ್ಕ ಗ್ರಾಮದ ಒಳ್ಳಿಕಾನ ಎಂಬಲ್ಲಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆಯ ಆರೋಪದಲ್ಲಿ ಸಂಪ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಅರಿಯಡ್ಕ ಗ್ರಾಮದ ಬಳ್ಳಿಕಾನ ಎಂಬಲ್ಲಿರುವ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಕುರಿತು ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಸಂಪ್ಯ ಠಾಣಾ ಎಸ್‍ಐ ಸಕ್ತಿವೇಲು ನೇತೃತ್ವದ ಪೊಲೀಸರು ಬುಧವಾರ ದಾಳಿ ಕಾರ್ಯಾಚರಣೆ ನಡೆಸಿ, ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ ಚರಣ್ ಮತ್ತು ಅರುಣ್ ಹಾಗೂ ಮನೆ ಮಾಲಿಕ ನಾರಾಯಣ ನಾಯ್ಕ ಎಂಬವರನ್ನು ಬಂಧಿಸಿದ್ದಾರೆ. 

ಆರೋಪಿಗಳು ಯುವತಿಯೊಬ್ಬಳನ್ನು ಕರೆದುಕೊಂಡು ಬಂದು ಈ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿತ ಆರೋಪಿಗಳನ್ನು ಬುಧವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)