varthabharthi

ಕರಾವಳಿ

ಮಂಜೇಶ್ವರ: ದೋಣಿ ಮಗುಚಿ ನಾಲ್ವರಿಗೆ ಗಾಯ

ವಾರ್ತಾ ಭಾರತಿ : 11 Sep, 2019

ಮಂಜೇಶ್ವರ: ಸಮುದ್ರಕ್ಕೆ  ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರ ಮಧ್ಯೆ ಉಂಟಾದ ಬಿರುಗಾಳಿಗೆ ಸಿಲುಕಿ ಮಗುಚಿ ನಾಲ್ವರು ಗಾಯಗೊಂಡ ಘಟನೆ ಮೂಸೋಡಿ ಅದೀಕಾದಲ್ಲಿ ಬುಧವಾರ ನಡೆದಿದೆ.

ಮಂಜೇಶ್ವರ ನಿವಾಸಿಗಳಾದ ಮೊಹಮ್ಮದ್ ಕುಂಞಿ(58), ಖಾತಿಮ್(53), ಸವಾದ್(32), ಖಲೀಲ್(35) ಗಾಯಗೊಂಡಿದ್ದು ಇವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ಬುಧವಾರ ಮುಂಜಾನೆ ಮೀನುಗಾರಿಕೆಗೆ ದೋಣಿ ಮೂಲಕ ತೆರಳಿದ್ದರು. ಕಡಲೊಳಗೆ ಒಂದಷ್ಟು ದೂರ ಸಾಗುತ್ತಿರುವಂತೆ ಗಾಳಿ ಹಾಗೂ ಹೆದ್ದೆರೆಗೆ ಸಿಲುಕಿದ ದೋಣಿ ನಿಯಂತ್ರಣ ಕಳಕೊಂಡು ಮುಗುಚಿ ಬಿದ್ದು ಬೃಹತ್ ತಡೆಗೋಡೆಗೆ ಬಡಿದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)