varthabharthi


ಕರಾವಳಿ

ಸೆ.14-15: ಕದ್ರಿ ಮಠದಲ್ಲಿ ಕರ್ನಾಟಕ ಜೋಗಿ ಸುಧಾರಕರ ಸಂಘದ ಸುವರ್ಣ ಮಹೋತ್ಸವ

ವಾರ್ತಾ ಭಾರತಿ : 11 Sep, 2019

ಮಂಗಳೂರು : ಕರ್ನಾಟಕದ ಜೋಗಿ ಸಮಾಜ ಸುಧಾರಕರ ಸಂಘ ಇದರ ಸುವರ್ಣ ಮಹೋತ್ಸವ ಸಮಾರಂಭ ಸೆ,14 ಮತ್ತು 15ರಂದು ಕದ್ರಿ ಶ್ರೀ ಗೋರಕ್ಷನಾಥ ಮಂದಿರದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಡಾ.ಪಿ.ಕೇಶವನಾಥ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕದಲಿ ಶ್ರೀ ಯೋಗೀಶ್ವರ ಮಠದ ಪಿಠಾಧಿಪತಿ ಶ್ರೀರಾಜಾಯೋಗಿ ನಿರ್ಮಲ್‌ನಾಥ್‌ಜೀ ಮಹಾರಾಜ್ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರು ಹಾಗೂ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ಗುರು ಶಿಷ್ಯ ಪರಂಪರೆಯ ನಾಥ ಸಂಪ್ರದಾಯದ ಅತ್ಯಮತ ಪುರತನ ಇತಿಹಾಸ ಹೊಂದಿರುವ ಕದಲೀ ಶ್ರೀ ಯೋಗೇಶ್ವರ (ಜೋಗಿ) ಮಠ ನಾಥ ಪಮಥದ ಕೇಂದ್ರವಾಗಿದ್ದು ರಾಜ್ಯದಲ್ಲಿ 20 ಲಕ್ಷ ಜೋಗಿ ಸಮುದಾಯದ ಸದಸ್ಯರಿದ್ದಾರೆ. ನಾಥ ಪಂಥಕ್ಕೆ ಸೇರಿದ ಜೋಗಿ, ಜೋಗೇರ್, ಸಮಜೋಗಿ, ಕಪಾಲಿ , ಕಿನ್ನರಿ ಜೋಗಿ, ಬಳೆಗಾರ ಜೋಗಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಸಮುದಾಯದ ಜನರನ್ನು ಸಂಘಟಿಸಲು ಕರ್ನಾಟಕ ಜೋಗಿ ಸಮಾಜ ಸುಧಾರಕರ ಸಮಘ ಮಂಗಳೂರು ದ.ಕ 1969ರಲ್ಲಿ ಶಿಕ್ಷಣ ತಜ್ಞ ದಿ. ವೈಗೊಪಾಲ ರವರ ನೇತೃತ್ವದಲ್ಲಿ ಸ್ಥಾಪನೆಗೊಂಡು 50 ವರ್ಷಗಳನ್ನು ಪೂರೈಸುತ್ತಿದೆ . ಈ ಸಂದರ್ಭದಲ್ಲಿ ಸ್ವರ್ಣ ಜ್ಯೋತಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ವಿವಿಧ ಕ್ಷೇತ್ರಗಳ 57 ಮಂದಿ ಸಾದಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದ ಕದ್ರಿ ಗೋಪಾಲನಾಥ್ ರಿಗೆ ಜೋಗಿ ಕಲಾ ಭೂಷಣ ಹಾಗೂ ಉದ್ಯಮಿ ಸಮಾಜ ಸೇವಕ ವೈಡಿ ಮಧೂರ್‌ಕರ್‌ರಿಗೆ ಜೋಗಿ ಸೇವಾ ಭೂಷಣ ಪ್ರಶಸಿ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಕೇಶವನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಪದಾಧಿಕಾರಿಗಳಾದ ಎಂ.ರಾಮಚಂದ್ರ,ಬಿ.ಗಂಗಾಧರ, ಎಚ್.ಕೆ.ಪುರುಷೋತ್ತಮ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)