varthabharthi

ಕ್ರೀಡೆ

ಟೋಕಿಯೊ ಒಲಿಂಪಿಕ್ಸ್: ಅಧಿಕಾರಿಗಳ ತಂಡದಲ್ಲಿ ಭಾರತದ ಮೂವರಿಗೆ ಸ್ಥಾನ

ವಾರ್ತಾ ಭಾರತಿ : 11 Sep, 2019

ಲುಸಾನೆ, ಸೆ.11: 2020ರ ಟೋಕಿಯೊ ಒಲಿಂಪಿಕ್ ಗೇಮ್ಸ್‌ಗೆ ಅಂತರ್‌ರಾಷ್ಟ್ರೀಯ ಹಾಕಿ ಒಕ್ಕೂಟ(ಎಫ್‌ಐಎಚ್)ಆಯ್ಕೆ ಮಾಡಿರುವ ಅಧಿಕಾರಿಗಳ ತಂಡದಲ್ಲಿ ಕೇವಲ ಮೂವರು ಭಾರತೀಯರು ಆಯ್ಕೆಯಾಗಿದ್ದಾರೆ.

 ಮಹಿಳಾ ಸಮಿತಿಯಲ್ಲಿ ಭಾರತದ ಅಧಿಕಾರಿಗೆ ಸ್ಥಾನ ನೀಡಲಾಗಿಲ್ಲ. ರಘು ಪ್ರಸಾದ್ ಹಾಗೂ ಜಾವೇದ್ ಶೇಖ್ ಅವರು ಪುರುಷರ ಅಂಪೈರ್ ಸಮಿತಿಯಲ್ಲಿದ್ದಾರೆ. ಮೂವರು ವೈದ್ಯಕೀಯ ಅಧಿಕಾರಿಗಳ ಪೈಕಿ ಭಾರತದ ಬಿಭು ನಾಯಕ್ ಅವರಿದ್ದಾರೆ. ಟೋಕಿಯೊ ಗೇಮ್ಸ್‌ನಲ್ಲಿ ಹಾಕಿ ಸ್ಪರ್ಧೆಗಳು ಮುಂದಿನ ವರ್ಷ ಜುಲೈ 25ರಿಂದ ಆಗಸ್ಟ್ 7ರ ತನಕ ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)