varthabharthi

ರಾಷ್ಟ್ರೀಯ

ಅಯೋಧ್ಯೆ ವಿವಾದ: ಫೇಸ್ಬುಕ್ ನಲ್ಲಿ ಮತ್ತೊಮ್ಮೆ ಬೆದರಿಕೆ ಸಂದೇಶ ಬಂದಿದೆ; ಹಿರಿಯ ವಕೀಲ ರಾಜೀವ್ ಧವನ್

ವಾರ್ತಾ ಭಾರತಿ : 12 Sep, 2019

ಹೊಸದಿಲ್ಲಿ, ಸೆ.12: ಅಯೋಧ್ಯೆ ವಿವಾದದಲ್ಲಿ ಮುಸ್ಲಿಂ ಕಕ್ಷಿದಾರರನ್ನು ಪ್ರತಿನಿಧಿಸುತ್ತಿರುವುದಕ್ಕೆ ನನಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ ಹಿರಿಯ ವಕೀಲ ರಾಜೀವ್ ಧವನ್, ‘ನಿನ್ನೆ ನನ್ನ ಕ್ಲರ್ಕ್ ನನ್ನು ನ್ಯಾಯಾಲಯದ ಆವರಣದಲ್ಲಿ ಥಳಿಸಲಾಗಿದೆ. ನನ್ನ ಫೇಸ್ಬುಕ್ ಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದೆ’’ ಎಂದು ಗುರುವಾರ ಸುಪ್ರೀಂಕೋರ್ಟ್ ಗೆ ತಿಳಿಸಿದ್ದಾರೆ.

ವಕೀಲರ ಕ್ಲರ್ಕ್ ಮೇಲೆ ಹಲ್ಲೆಯನ್ನು ಖಂಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ‘‘ಇಂತಹ ವರ್ತನೆಗಳು ನಡೆಯಬಾರದು. ನಾವೆಲ್ಲರೂ ವಾದದ ಮನಸ್ಥಿತಿಯಲ್ಲಿದ್ದೇವೆ. ಎರಡೂ ಕಡೆಯ ವಕೀಲರು ಎಲ್ಲ ಪ್ರಭಾವದಿಂದ ಮುಕ್ತವಾಗಿ ತಮ್ಮ ವಾದವನ್ನು ಮುಂದಿಡಬೇಕು. ಹಲ್ಲೆ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)