ದ. ಆಫ್ರಿಕಾ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ರಾಹುಲ್ ಹೊರಕ್ಕೆ , ಗಿಲ್ ಗೆ ಅವಕಾಶ
ಮುಂಬೈ, ಸೆ.12: ದಕ್ಷಿಣ ಆಫ್ರಿಕಾ ವಿರುದ್ಧ ತವರಿನನಲ್ಲಿ ನಡೆಯಲಿರುವ ಮೂರು ಟೆಸ್ಟ್ ಗಳ ಸರಣಿಗೆ ಭಾರತ ದ ಕ್ರಿಕೆಟ್ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿಯು ಗುರುವಾರ ಪ್ರಕಟಿಸಲಾಗಿದ್ದು, ಕಳಪೆ ಫಾರ್ಮ್ ನಲ್ಲಿರುವ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ಅವರನ್ನು ಕೈ ಬಿಡಲಾಗಿದೆ. ಅಂಡರ್ -19 ವಿಶ್ವಕಪ್ ತಂಡದ ಸ್ಟಾರ್ ಆಟಗಾರ ಮನ್ ಗಿಲ್ ತಂಡದಲ್ಲಿ ಮೊದಲ ಬಾರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇದೇ ವೇಳೆ ಸೆಪ್ಟೆಂಬರ್ 26 ರಿಂದ ನಡೆಯಲಿರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕಾಗಿ ಆಯ್ಕೆ ಸಮಿತಿಯು ಮಂಡಳಿಯ ಅಧ್ಯಕ್ಷರ ಇಲೆವೆನ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಹೆಸರಿಸಿದೆ.
3 ಟೆಸ್ಟ್ ಗಳ ಸರಣಿಗೆ ಭಾರತದ ತಂಡ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್ , ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಶುಬ್ ಮನ್ ಗಿಲ್.
ಮಂಡಳಿಯ ಅಧ್ಯಕ್ಷರ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಮಾಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಲ್, ಎ.ಆರ್.ಈಶ್ವರನ್, ಕರುಣ್ ನಾಯರ್, ಸಿದ್ಧೇಶ್ ಲಾಡ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ಧರ್ಮೇಂದ್ರಸಿಂಹ ಜಡೇಜಾ, ಅವೇಶ್ ಖಾನ್, ಇಶಾನ್ ಪೊರೆಲ್, ಶಾರ್ದುಲ್ ಠಾಕೂರ್