varthabharthi

ರಾಷ್ಟ್ರೀಯ

ಇದು ಟ್ರೈಲರ್ ಮಾತ್ರ, ಸಿನೆಮಾ ಇನ್ನೂ ಬಾಕಿ ಇದೆ: 100 ದಿನಗಳ ಆಡಳಿತದ ಬಗ್ಗೆ ಮೋದಿ

ವಾರ್ತಾ ಭಾರತಿ : 12 Sep, 2019

ಹೊಸದಿಲ್ಲಿ, ಸೆ.12: ಕೇಂದ್ರ ಸರಕಾರದ ಆಡಳಿತ 100 ದಿನಗಳನ್ನು ಪೂರೈಸಿದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ಇದು ಟ್ರೈಲರ್ ಮಾತ್ರ, ಸಿನೆಮಾ ಇನ್ನೂ ಬಾಕಿ ಇದೆ” ಎಂದಿದ್ದಾರೆ.

“ಚುನಾವಣೆಗಿಂತ ಮೊದಲು ನಾನು ಕೆಲಸ ಪ್ರಧಾನ ಸರಕಾರದ ಭರವಸೆ ನೀಡಿದ್ದೆ. ಹಿಂದಿನ ಸರಕಾರಕ್ಕಿಂತಲೂ ವೇಗವಾಗಿ ಕೆಲಸ ಮಾಡುವ ಸರಕಾರದ ಭರವಸೆ ನೀಡಿದ್ದೆ. ನಮ್ಮ ಸರಕಾರದ 100 ದಿನಗಳು ಬರಿಯ ಟ್ರೈಲರ್ ಮಾತ್ರ, ಇಡೀ ಚಿತ್ರ ಇನ್ನಷ್ಟೇ ಬರಬೇಕಿದೆ” ಎಂದರು.

ದೇಶದ ಸರ್ವತೋಮುಖ ಅಭಿವೃದ್ಧಿಗೆ ತನ್ನ ಸರಕಾರ ಬದ್ಧವಾಗಿದೆ ಎಂದ ಅವರು, ದೇಶವನ್ನು ದೋಚುವವರನ್ನು ಶಿಕ್ಷಿಸಲೂ ಸಹ ಸಿದ್ಧವಿದೆ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)