varthabharthi

ಅಂತಾರಾಷ್ಟ್ರೀಯ

ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಇಸ್ರೇಲ್‌ಗೆ ವಿಶ್ವಸಂಸ್ಥೆ ಮುಖ್ಯಸ್ಥ ಎಚ್ಚರಿಕೆ

ವಾರ್ತಾ ಭಾರತಿ : 12 Sep, 2019

 ನ್ಯೂಯಾರ್ಕ್, ಸೆ. 12: ಆಕ್ರಮಿತ ಪಶ್ಚಿಮ ದಂಡೆಯ ಮಹತ್ವದ ಭಾಗವೊಂದನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಯೋಜನೆಯು ಅಂತರ್‌ರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬುಧವಾರ ಎಚ್ಚರಿಸಿದ್ದಾರೆ.

‘‘ಇಂಥ ಕ್ರಮಗಳು ಜಾರಿಗೊಂಡರೆ ಅಂತರ್‌ರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗುತ್ತದೆ’’ ಹೇಳಿಕೆಯೊಂದರಲ್ಲಿ ಗುಟೆರಸ್‌ರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

‘‘ಮಾತುಕತೆಗಳನ್ನು ಪುನರಾರಂಭಿಸುವ ಮತ್ತು ಪ್ರಾದೇಶಿಕ ಶಾಂತಿಗೆ ಮರುಜೀವ ನೀಡುವ ಸಾಧ್ಯತೆಗಳಿಗೆ ಇಂಥ ಕೃತ್ಯಗಳು ವಿನಾಶಕಾರಿಯಾಗಿರುತ್ತದೆ ಹಾಗೂ ದ್ವಿರಾಷ್ಟ್ರ ಪರಿಹಾರದ ಸಾಧ್ಯತೆಯನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ’’ ಎಂದು ಅವರು ಹೇಳಿದ್ದಾರೆ.

ನಾನು ಮುಂದಿನ ಚುನಾವಣೆಯಲ್ಲಿ ಗೆದ್ದರೆ, ಇಸ್ರೇಲ್‌ನ ನಿಯಂತ್ರಣವನ್ನು ಜೋರ್ಡಾನ್ ಕಣಿವೆ ಮತ್ತು ಉತ್ತರದಲ್ಲಿ ಮೃತ ಸಮುದ್ರ (ಡೆಡ್ ಸಿ)ದವರೆಗೆ ವಿಸ್ತರಿಸುತ್ತೇನೆ ಎಂದು ನೆತನ್ಯಾಹು ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಹೇಳಿದ್ದಾರೆ. ಇದು ಸಂಭವಿಸಿದರೆ ಪಶ್ಚಿಮ ದಂಡೆಯ ಮೂರನೇ ಒಂದು ಭಾಗ ಇಸ್ರೇಲ್‌ಗೆ ಹೋಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)