ಮನೀಶ್ ಎರಡನೇ ಸುತ್ತಿಗೆ ಲಗ್ಗೆ
ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್
ಎಕಟೆರಿನ್ಬರ್ಗ್(ರಶ್ಯ), ಸೆ.12: ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಗುರುವಾರ ನಡೆದ ಪುರುಷರ 63 ಕೆಜಿ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕಿರ್ಗಿಸ್ತಾನದ ಉಲು ಅರ್ಗೆನ್ ಕಾಡಿರ್ಬೆಕ್ರನ್ನು 5-0 ಅಂತರದಿಂದ ಮಣಿಸಿದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಬಾಕ್ಸರ್ ಮನೀಶ್ ಕೌಶಿಕ್ ಎರಡನೇ ಸುತ್ತಿಗೆ ಪ್ರವೇಶಿಸಿದರು.
ಏಕಪಕ್ಷೀಯವಾಗಿ ಸಾಗಿದ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಕೌಶಿಕ್ ಮುಂದಿನ ಸುತ್ತಿನಲ್ಲಿ ಹಾಲೆಂಡ್ನ ಎನ್ರಿಕೊ ಲಾಕ್ರೂಝ್ ಸವಾಲು ಎದುರಿಸಲಿದ್ದಾರೆ.
Next Story