ಭಾರತೀಯ ತಂಡಕ್ಕೆ ಶರತ್ ಕಮಲ್, ಮಣಿಕಾ ಬಾತ್ರಾ ಸಾರಥ್ಯ
ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್
ಹೊಸದಿಲ್ಲಿ, ಸೆ.14: ಇಂಡೋನೇಶ್ಯದಲ್ಲಿ ರವಿವಾರ ಆರಂಭವಾಗಲಿರುವ ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಜಿ.ಸತ್ಯನ್, ಶರತ್ ಕಮಲ್ ಹಾಗೂ ಮಣಿಕಾ ಬಾತ್ರಾ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
ಏಶ್ಯನ್ ಚಾಂಪಿಯನ್ಶಿಪ್ 2020ರ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತಾ ಟೂರ್ನಿಯಾಗಿದೆ.
10 ಸದಸ್ಯರ ತಂಡದಲ್ಲಿ ತಲಾ ಐವರು ಪುರುಷರು ಹಾಗೂ ಮಹಿಳಾ ಸ್ಪರ್ಧಿಗಳಿದ್ದಾರೆ. ಚೀನಾದಲ್ಲಿ 10 ದಿನಗಳ ಕಾಲ ಪೂರ್ವ ತಯಾರಿ ಶಿಬಿರದಲ್ಲಿ ಭಾಗವಹಿಸಿರುವ ಭಾರತ ಶನಿವಾರ ಇಂಡೋನೇಶ್ಯ ಸಿಟಿಯನ್ನು ತಲುಪಲಿದೆ.
ಜಪಾನ್, ಕೊರಿಯಾ, ತೈಪೆ ಹಾಗೂ ಸಿಂಗಾಪುರದಂತಹ ಪ್ರಬಲ ಸ್ಪರ್ಧಿಗಳ ಎದುರು ಅನುಭವಿ ಆಟಗಾರ ಶರತ್ ಹಾಗೂ ಅಗ್ರ ರ್ಯಾಂಕಿನ ಸತ್ಯನ್ಗೆ ಅಗ್ನಿ ಪರೀಕ್ಷೆ ಎದುರಾಗಲಿದೆ.
ಮಹಿಳೆಯರ ವಿಭಾಗದಲ್ಲಿ ಎಲ್ಲರ ಕಣ್ಣು ಮಣಿಕಾ ಬಾತ್ರಾ ಮೇಲಿದೆ. ಡಬಲ್ಸ್ ಇವೆಂಟ್ನಲ್ಲಿ ಮಧುರಿಕಾ ಪಾಟ್ಕರ್ ಜೊತೆ ಆಡಲಿದ್ದಾರೆ.
Next Story