varthabharthi


ಅಂತಾರಾಷ್ಟ್ರೀಯ

ಮೃತ ವೈದ್ಯನ ನಿವೇಶನದಲ್ಲಿ 2,200ಕ್ಕೂ ಅಧಿಕ ಭ್ರೂಣಗಳ ಅವಶೇಷ ಪತ್ತೆ!

ವಾರ್ತಾ ಭಾರತಿ : 15 Sep, 2019

  ನ್ಯೂಯಾರ್ಕ್,ಸೆ.15: ಇತ್ತೀಚೆಗೆ ನಿಧನರಾದ ಅಮೆರಿಕದ ವೈದ್ಯರೊಬ್ಬರಿಗೆ ಸೇರಿದ ನಿವೇಶನದಲ್ಲಿ 2200ಕ್ಕೂ ಅಧಿಕ ಸಂರಕ್ಷಿತ ಭ್ರೂಣಗಳ ಅವಶೇಷಗಳು ಪತ್ತೆಯಾಗಿರುವುದಾಗಿ ವಿಲ್‌ಕೌಂಟಿ ನಗರದ ಪೊಲೀಸ್ ವರಿಷ್ಠರ ಕಾರ್ಯಾಲಯವು ತಿಳಿಸಿದೆ.

  ಸೆಪ್ಚೆಂಬರ್ 3ರಂದು ನಿಧನರಾದ ಉಲ್ರಿಚ್ ಕ್ಲೋಫರ್ ಅವರಿಗೆ ಸೇರಿದ ನಿವೇಶನದ ಪರಿಶೀಲನೆಯನ್ನು ಅವರ ಕುಟುಂಬಿಕರು ಹಾಗೂ ವಕೀಲರು ನಡೆಸಿದ ಸಂದರ್ಭದಲ್ಲಿ ಒಟ್ಟು 2246 ವೈದ್ಯಕೀಯವಾಗಿ ಸಂರಕ್ಷಿಸಲ್ಪಟ್ಟ ಭ್ರೂಣದ ಅವಶೇಷಗಳು ಪತ್ತೆಯಾಗಿವೆಯೆಂದು ಪೊಲೀಸ್ ವರಿಷ್ಠರ ಕಾರ್ಯಾಲಯ ತಿಳಿಸಿದೆ.

    ತನಿಖೆಗೆ ಮೃತ ವೈದ್ಯರ ಕುಟುಂಬಿಕರು ಸಂಪೂರ್ಣವಾಗಿ ನೆರವಾಗುತ್ತಿದ್ದಾರೆ. ನಿವೇಶನದಲ್ಲಿ ವೈದ್ಯಕೀಯ ಪ್ರಕ್ರಿಯೆಗಳನ್ನು ನಡೆಸಿರುವ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

  ಮೃತ ವೈದ್ಯ ಕ್ಲೊಫ್ನರ್ ಅವರು ಇಂಡಿಯಾನಾದಲ್ಲಿ ಹಲವು ದಶಕಗಳಿಂದ ಮೂರು ಕ್ಲಿನಿಕ್‌ಗಳಲ್ಲಿ ಗರ್ಭಪಾತಗಳನ್ನು ನಡೆಸುತ್ತಿದ್ದರು. ವೈದ್ಯಕೀಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2016ರಲ್ಲಿ ಅವರ ವೈದ್ಯಕೀಯ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿತ್ತೆನ್ನಲಾಗಿದೆ.

ಪೊಲೀಸರು ಭ್ರೂಣಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆಂದು ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)