varthabharthiರಾಷ್ಟ್ರೀಯ

ಜೈಲಿನಲ್ಲಿ 74ನೇ ಹುಟ್ಟುಹಬ್ಬಕ್ಕೆ ಕಾಲಿಟ್ಟ ಚಿದಂಬರಂಗೆ ಪುತ್ರ ಕಾರ್ತಿ ಬರೆದ ಪತ್ರದಲ್ಲಿ ಏನಿದೆ ಗೊತ್ತೇ?

ವಾರ್ತಾ ಭಾರತಿ : 16 Sep, 2019

ಹೊಸದಿಲ್ಲಿ, ಸೆ.16: ಭ್ರಷ್ಟಾಚಾರದ ತನಿಖೆಗೆ ಸಂಬಂಧಿಸಿ ಸೆ.5ರಿಂದ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸೋಮವಾರ ತಿಹಾರ್ ಜೈಲಿನಲ್ಲಿ 74ನೇ ಜನ್ಮದಿನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ತನ್ನ ತಂದೆಗೆ ಮುಕ್ತ ಪತ್ರವನ್ನು ಬರೆದಿರುವ ಕಾರ್ತಿ ಚಿದಂಬರಂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

2014ರ ಚುನಾವಣೆ ಪ್ರಚಾರದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಸ್ತಾವಿಸಿದ್ದ ತನ್ನದು 56 ಇಂಚಿನ ಎದೆ ಎಂಬ ಮಾತನ್ನು ಉಲ್ಲೇಖಿಸಿದ ಕಾರ್ತಿ, ‘‘ನೀವು ಇಂದು 74ನೇ ವಯಸ್ಸಿಗೆ ಕಾಲಿಟ್ಟಿದ್ದೀರಿ. 56 ಇಂಚಿನ ಎದೆಯಿಂದ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವು ಇಂದು ದೇಶದಲ್ಲಿ ಹುಟ್ಟುಹಬ್ಬ ಆಚರಿಸುವ ಸ್ಥಿತಿಯಲ್ಲಿಲ್ಲ. ನೀವಿಲ್ಲದೆ ನಿಮ್ಮ ಹುಟ್ಟುಹಬ್ಬ ಆಚರಿಸಲು ಸಾಧ್ಯವಿಲ್ಲ. ನಿಮ್ಮನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಅನುಪಸ್ಥಿತಿ ನಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ನೀವು ಆದಷ್ಟು ಬೇಗನೆ ಮನೆಗೆ ವಾಪಸಾಗಿ ನಮ್ಮಿಂದಿಗೆ ಕೇಕ್ ಕತ್ತಿಸುವ ವಿಶ್ವಾಸವಿದೆ. ಇಷ್ಟೆಲ್ಲಾ ನಡೆದರೂ ನಿಮ್ಮ ಅತಿಯಾದ ಸ್ಫೂರ್ತಿ ನೋಡಿ ನನಗೆ ಸಂತೋಷವಾಗುತ್ತಿದೆ’’ ಎಂದು ತಂದೆ ಚಿದಂಬರಂಗೆ ಬರೆದ ಪತ್ರದಲ್ಲಿ ಕಾರ್ತಿ ತಿಳಿಸಿದ್ದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)