varthabharthiಅಂತಾರಾಷ್ಟ್ರೀಯ

ಪಾಕ್ ಪತ್ರಕರ್ತನ ಅಪಹರಿಸಿ ಹತ್ಯೆ: ತನಿಖೆಗೆ ಒತ್ತಾಯ

ವಾರ್ತಾ ಭಾರತಿ : 16 Sep, 2019

ಇಸ್ಲಾಮಾಬಾದ್, ಸೆ. 16: ಸೆಪ್ಟಂಬರ್ 7ರಿಂದ ನಾಪತ್ತೆಯಾಗಿರುವ ಪಾಕಿಸ್ತಾನಿ ಪತ್ರಕರ್ತ ಝಾಫರ್ ಅಬ್ಬಾಸ್‌ರ ಮೃತದೇಹ ಪಂಜಾಬ್‌ನಲ್ಲಿ ಸೆಪ್ಟಂಬರ್ 11ರಂದು ಪತ್ತೆಯಾಗಿದೆ ಎಂದು ಅಂತರ್‌ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಹೇಳಿಕೆಯೊಂದರಲ್ಲಿ ಸೋಮವಾರ ತಿಳಿಸಿದೆ ಹಾಗೂ ಹತ್ಯೆಯನ್ನು ಖಂಡಿಸಿದೆ.

‘ಡಾನ್’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಕೆಲಸ ಮುಗಿಸಿ ರಾತ್ರಿ ತಡವಾಗಿ ಮನೆಗೆ ಹೋಗುತ್ತಿದ್ದಾಗ ಅವರನ್ನು ಅಪಹರಿಸಲಾಗಿತ್ತು.

ಈ ವಿಷಯದಲ್ಲಿ ಅಪಹರನ ದೂರನ್ನು ಸಲ್ಲಿಸಿದ ಹೊರತಾಗಿಯೂ ಪೊಲೀಸರು ಪ್ರಕರಣದ ತನಿಖೆ ನಡೆಸಿಲ್ಲ ಎಂದು ಒಕ್ಕೂಟ ಮತ್ತು ಅದಕ್ಕೆ ಒಳಪಟ್ಟಿರುವ ಪಾಕಿಸ್ತಾನ್ ಪತ್ರಕರ್ತರ ಫೆಡರಲ್ ಒಕ್ಕೂಟ ಆರೋಪಿಸಿವೆ.

‘‘ಅಬ್ಬಾಸ್ ಹತ್ಯೆಯ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿ, ಹಂತಕರನ್ನು ಶಿಕ್ಷಿಸಿ ಮತ್ತು ಅಬ್ಬಾಸ್ ಕುಟುಂಬಕ್ಕೆ ಆರ್ಥಿಕ ಪರಿಹಾರವನ್ನು ಒದಗಿಸಿ ಎಂದು ಪಾಕಿಸ್ತಾನ್ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಜಿ.ಎಂ. ಜಮಾಲಿ ಮತ್ತು ಪ್ರಧಾನ ಕಾರ್ಯದರ್ಶಿ ರಾನಾ ಎಂ. ಅಝೀಮ್ ಪಂಜಾಬ್ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)