varthabharthiಕರಾವಳಿ

ಬ್ಯಾರಿ ನಿಖಾಃ ಹೆಲ್ಪ್ ಲೈನ್ ಅಂತರ್ ರಾಷ್ಟ್ರೀಯ ನೂತನ ಸಮಿತಿ ರಚನೆ

ವಾರ್ತಾ ಭಾರತಿ : 16 Sep, 2019

ಮಂಗಳೂರು: ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಅಂತರ್ ರಾಷ್ಟ್ರೀಯ ನೂತನ ಸಮಿತಿಯು ರಚನೆಯಾಯಿತು.

ತಂಡದ ಅಧ್ಯಕ್ಷರಾಗಿ ಇಮ್ತಿಯಾಝ್ ಉಡುಪಿ (ಒಮನ್), ಉಪಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಬಾ ಹಸನೀ(ಸೌದಿ ಅರೇಬಿಯಾ), ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ಕಲ್ಲಡ್ಕ (ದುಬೈ), ಸಂಘಟನಾ ಸಲಹೆಗಾರರಾಗಿ ಖಲಂದರ್ ರಝ್ವಿ ಬೆಜ್ಜವಳ್ಳಿ (ದುಬೈ), ಕೋಶಾಧಿಕಾರಿಯಾಗಿ ಸುಹೈಲ್ ತೊಕ್ಕೊಟ್ಟು, ಸಾಂತ್ವನ ವಿಭಾಗದ ಕಾರ್ಯದರ್ಶಿಯಾಗಿ ಮಜೀದ್ ಬಿಕರ್ನಕಟ್ಟೆ, ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿ ಫೌಸಿಲ್ ನೆಕ್ಕರೆ, ಮಾಹಿತಿ - ಸಂಪರ್ಕ ಕಾರ್ಯದರ್ಶಿಯಾಗಿ ಅಶ್ರಫ್ ಶಿರ್ವ (ಸೌದಿ ಅರೇಬಿಯಾ), ಸಂಘಟನಾ ಕಾರ್ಯದರ್ಶಿಯಾಗಿ ನೌಶಾದ್ ಅಮ್ಮೆಂಬಳ ಆಯ್ಕೆಯಾದರು.

ನೂತನವಾಗಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗೂ ಶುಭಕೋರಿದ ತಂಡದ ಸ್ಥಾಪಕಾಧ್ಯಕ್ಷ ರಾಶ್ ಬ್ಯಾರಿ ಮುಂದಿನ ಯೋಜನೆಯ ಬಗೆಗಿನ ಮಾಹಿತಿ ಹಾಗೂ ಕಾರ್ಯಕ್ಷಮತೆಯ ಬಗ್ಗೆ ನಿರ್ದೇಶನ ನೀಡಿದರು.

ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡ ವಧು ವರರಿಗೆ ಸೂಕ್ತ ವೈವಾಹಿಕ ಸಂಬಂಧವನ್ನು ಕಲ್ಪಿಸಿಕೊಡುವುದಲ್ಲದೇ ಆರ್ಥಿಕವಾಗಿ ಅಶಕ್ತರಾದ ಕುಟುಂಬದ ವಿವಾಹ ಸಮಾರಂಭಕ್ಕೆ ಮದುವೆ ಉಡುಪುಗಳನ್ನು ನೀಡುವುದು, ಪ್ರವಾಹ ಪೀಡಿತ ಪ್ರದೇಶ ನಿವಾಸಿಗಳಿಗೆ ಸ್ಪಂದಿಸಿ ಬಟ್ಟೆ ಬರೆ, ಆಹಾರ ಹಾಗೂ ದಿನ ಬಳಕೆಯ ಸಾಮಗ್ರಿಗಳನ್ನು ನೀಡಿವುದು, ಮಂಗಳೂರಿನ ಆಸುಪಾಸಿನ ನಿರಾಶ್ರಿತರಿಗೆ, ಸರಕಾರಿ ಆಸ್ಪತ್ರೆಗಳಲ್ಲಿರುವ ಒಳರೋಗಿಗಳಿಗೂ ನೆರವು ನೀಡುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)