varthabharthiಕ್ರೀಡೆ

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ದುರ್ಯೋಧನ ಸವಾಲು ಅಂತ್ಯ

ವಾರ್ತಾ ಭಾರತಿ : 16 Sep, 2019

ಎಕಟೆರಿನ್‌ಬರ್ಗ್(ರಶ್ಯ), ಸೆ.16: ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ಭಾರತದ ದುರ್ಯೋಧನ ಸಿಂಗ್ ನೇಗಿ(69ಕೆಜಿ)ಜೋರ್ಡನ್‌ನ ಝೈದ್ ಎಹ್ಸಾನ್ ವಿರುದ್ಧ ಸೋಲನುಭವಿಸುವುದರೊಂದಿಗೆ ಟೂರ್ನಿಯಿಂದ ನಿರ್ಗಮಿಸಿದರು.

ಸೋಮವಾರ ನಡೆದ ಪಂದ್ಯದಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ನೇಗಿ ಆರನೇ ಶ್ರೇಯಾಂಕದ ಝೈದ್ ವಿರುದ್ದ 1-4 ಅಂತರದಿಂದ ಸೋತಿದ್ದಾರೆ. ತನ್ನ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ತೋರಲು ವಿಫಲರಾದರು.

 ಮೊದಲ ಸುತ್ತಿನಲ್ಲಿ ಝೈದ್ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಸರಿಯಾದ ರಣನೀತಿಯ ಮೂಲಕ ನೇಗಿಯ ರಕ್ಷಣಾತ್ಮಕ ಆಟವನ್ನು ಭೇದಿಸಿದರು. ಎರಡನೇ ಸುತ್ತಿನಲ್ಲಿ ನೇಗಿ ಚೇತರಿಕೆಯ ಪ್ರದರ್ಶನ ನೀಡಿದರು. ಆದರೆ, ಒಟ್ಟಾರೆ ವೇಗ ಹಾಗೂ ನಿಖರತೆಯಲ್ಲಿ ನೇಗಿಯನ್ನು ಹಿಂದಿಕ್ಕಿದ ಝೈದ್ ಮತ್ತೊಮ್ಮೆ ಮೇಲುಗೈ ಸಾಧಿಸಿದರು.

ಪಂದ್ಯದ ವೇಳೆ ಇಬ್ಬರೂ ಬಾಕ್ಸರ್‌ಗಳಿಗೆ ರೆಫರಿ ಪದೇ ಪದೇ ಸಲಹೆ ನೀಡಿದರು. ಝೈದ್‌ಗೆ ಒಂದು ಹಂತದಲ್ಲಿ ಎಚ್ಚರಿಕೆಯನ್ನು ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)