varthabharthiಕರ್ನಾಟಕ

ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ: ಆತ್ಮಹತ್ಯೆ ಶಂಕೆ

ವಾರ್ತಾ ಭಾರತಿ : 16 Sep, 2019

ಶಿವಮೊಗ್ಗ, ಸೆ. 16: ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣದ ಗುಳ್ಳಮ್ಮ ದೇವಾಲಯ ಸಮೀಪದ ತುಂಗಾ ನದಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. 

ಇತ್ತೀಚೆಗೆ ಚಿಕ್ಕದಿಬ್ಬೂರಹಳ್ಳಿ ಗ್ರಾಮದಿಂದ ಕಣ್ಮರೆಯಾಗಿದ್ದ ನಿತೀನ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಯಾವುದೋ ಕಾರಣದಿಂದ ಮಾನಸಿಕವಾಗಿ ನೊಂದುಕೊಂಡು ತುಂಗಾ ನದಿಗೆ ಹಾರಿ ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ನಿತೀನ್ ತಾಯಿ ಶಾರದಮ್ಮರವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)