varthabharthiರಾಷ್ಟ್ರೀಯ

ಮಲಯಾಳಂ ನಟ ಸತಾರ್ ನಿಧನ

ವಾರ್ತಾ ಭಾರತಿ : 17 Sep, 2019

ಕೊಚ್ಚಿ, ಸೆ.17: ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಮಲಯಾಳಂ  ಚಿತ್ರ ನಟ ಸತಾರ್ (67)  ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ  ಬೆಳಗ್ಗೆ ನಿಧನರಾದರು.

ಕೇರಳದ ಎರ್ನಾಕುಲಂ ಜಿಲ್ಲೆಯ ಕಡುಂಗಲ್ಲೂರಿನಲ್ಲಿ  ಮೇ 25, 1952ರಲ್ಲಿ ಹುಟ್ಟಿದ ಸತಾರ್ 1976ರಲ್ಲಿ  ವಿನ್ಸೆಂಟ್  ಮಾಸ್ಟರ್ ನಿರ್ದೇಶನದ 'ಅನಾವರಣಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.  ಅವರು ಮಲಯಾಳಂ, ತಮಿಳು ಮತ್ತು ತೆಲುಗು ಸೇರಿದಂತೆ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ. 2014ರಲ್ಲಿ ಬಿಡುಗಡೆಯಾದ 'ಪರಾಯನ್ ಬಾಕಿವೆಚ್ಚು' ಅವರ ಕೊನೆಯ ಅಭಿನಯದ ಚಿತ್ರ.

ಸತಾರ್ 1979ರಲ್ಲಿ ಖ್ಯಾತ ನಟಿ ಜಯಭಾರತಿ ಅವರನ್ನು ವಿವಾಹವಾಗಿದ್ದರು. ಆದರೆ 1987ರಲ್ಲಿ  ಅವರ ದಾಂಪತ್ಯ ಜೀವನ  ಮುರಿದು ಬಿತ್ತು.  ಈ ದಂಪತಿಗೆ  ಜನಿಸಿದ್ದ ಪುತ್ರ ಕೃಷ್ ಸತಾರ್ ನಟನಾಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)