varthabharthiಅಂತಾರಾಷ್ಟ್ರೀಯ

ಝಾಕಿರ್ ನಾಯ್ಕ್ ಹಸ್ತಾಂತರಿಸುವಂತೆ ಮೋದಿ ಹೇಳಿಲ್ಲ ಎಂದ ಮಲೇಷ್ಯಾ ಪ್ರಧಾನಿ

ವಾರ್ತಾ ಭಾರತಿ : 17 Sep, 2019

ಕೌಲಾಲಂಪುರ್:  ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್‍ ರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತದ ಪ್ರಧಾನಿ ತಮಗೆ ಮನವಿ ಮಾಡಿಲ್ಲ ಎಂದು ಮಲೇಷ್ಯಾದ ಪ್ರಧಾನಿ ಮಹಾತಿರ್ ಮುಹಮ್ಮದ್ ಹೇಳಿದ್ದಾರೆ.

ಭಾರತ ಸರಕಾರ ಅಧಿಕೃತವಾಗಿ ಈ ನಿಟ್ಟಿನಲ್ಲಿ ನೋಟಿಸ್ ನೀಡಿದ್ದರೂ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ಝಾಕಿರ್‍ ರನ್ನು ಗಡೀಪಾರುಗೊಳಿಸುವ ಯಾವುದೇ ಮನವಿಯನ್ನು ತಾವು ಮೋದಿಯನ್ನು ರಷ್ಯಾದಲ್ಲಿ ಇಕನಾಮಿಕ್ ಫೋರಂ ಸಭೆ ಸಂದರ್ಭ ಭೇಟಿಯಾದಾಗ ಅವರು ಮಾಡಿಲ್ಲ, ಎಂದು ಮಹಾತಿರ್ ಹೇಳಿದರು.

``ಹೆಚ್ಚಿನ ದೇಶಗಳಿಗೆ ಅವರು ಬೇಕಾಗಿಲ್ಲ, ನಾನು ಮೋದಿಯನ್ನು ಭೇಟಿಯಾದೆ, ಅವರು ಈ ವ್ಯಕ್ತಿಯನ್ನು ಕೇಳಿಲ್ಲ'' ಎಂದು ಮಹಾತಿರ್ ಮಂಗಳವಾರ ಕೌಲಾಲಂಪುರ್ ಮೂಲದ ಬಿಎಫ್‍ಎಂ ಮಲೇಷ್ಯಾ ರೇಡಿಯೋ ಕೇಂದ್ರಕ್ಕೆ ತಿಳಿಸಿದ್ದಾರೆ.

ಝಾಕಿರ್ ನಾಯ್ಕ್ ರಿಗೆ ಸಾರ್ವಜನಿಕವಾಗಿ ಮಾತನಾಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ಮಹಾತಿರ್ ``ಅವರು ಈ ದೇಶದ ಪ್ರಜೆಯಲ್ಲ, ಆದರೂ ಇಲ್ಲಿನ ಖಾಯಂ ನಿವಾಸಿ ಸ್ಥಾನಮಾನವನ್ನು ಹಿಂದಿನ ಸರಕಾರ ನೀಡಿರಬೇಕು, ಅಂತಹವರು ಈ ದೇಶದ ರಾಜಕೀಯ ಯಾ ವ್ಯವಸ್ಥೆಯ ಕುರಿತಂತೆ ಮಾತನಾಡುವ ಹಾಗಿಲ್ಲ,'' ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)