varthabharthi

ನಿಮ್ಮ ಅಂಕಣ

ಕನ್ನಡವನ್ನು ಹತ್ತಿಕ್ಕುವುದನ್ನು ನಿಲ್ಲಿಸಿ

ವಾರ್ತಾ ಭಾರತಿ : 17 Sep, 2019
-ಪರಮೇಶ್ವರ ಬಿ., ಬಿರಾದಾರ, ನಾರಾಯಣಪುರ, ಬೀದರ್

ಮಾನ್ಯರೇ,
ಹಿಂದಿ ರಾಷ್ಟ್ರ ಭಾಷೆಯೆಂಬ ಸುಳ್ಳು ವದಂತಿಗಳನ್ನು ಹಬ್ಬಿಸಲು ಹೊರಟಿರುವ ಕೇಂದ್ರ ಸರಕಾರದ ನಡೆ ಕನ್ನಡಿಗರಲ್ಲಿ ತೀವ್ರತರವಾದ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದಿ ಭಾಷೆಯು ಕೂಡ ಕನ್ನಡದಂತೆಯೇ ಇನ್ನುಳಿದ 22 ಅಧಿಕೃತ ಭಾಷೆಗಳಲ್ಲೊಂದು ಎಂಬ ಕಟು ವಾಸ್ತವಿಕ ಸತ್ಯಾಂಶ ಸರಕಾರಗಳಿಗೆ ಮನದಟ್ಟಾಗಬೇಕಾಗಿರುವುದು ಅತ್ಯವಶ್ಯವಾಗಿದೆ. ಕನ್ನಡವನ್ನು ಉಳಿಸಬೇಕಾದವರೇ ಕನ್ನಡವನ್ನು ಪ್ರಪಾತಕ್ಕೆ ತಳ್ಳುತ್ತಿರುವುದು ಕನ್ನಡಿಗರಲ್ಲಿ ಆತಂಕ ಸೃಷ್ಟಿಸುತ್ತಿದೆ. ಕೇಂದ್ರ ಸರಕಾರ ಎಲ್ಲಿ ಮಾತೃಭಾಷೆ ಹಿಂದಿ ಇದೆಯೋ ಅಲ್ಲಿ ಹಿಂದಿ ಹೇರಿಕೆ ಮಾಡಲಿ. ಆದರೆ, ಸಂವಿಧಾನದಲ್ಲಿ ಹಿಂದಿಯಂತೆಯೇ ಅಧಿಕೃತ ಭಾಷೆ ಎಂಬ ಹೆಗ್ಗಳಿಕೆಯನ್ನು ಹೊತ್ತು, ತನ್ನದೇ ಆದ ಶಾಸ್ತ್ರೀಯ ಸ್ಥಾನ-ಮಾನಗಳನ್ನು ಒಳಗೊಂಡಿರುವ ಕನ್ನಡ ಮಾತೃಭಾಷೆ ಇರುವ ಕರ್ನಾಟಕದಲ್ಲಿ ಹಿಂದಿಯ ಹೇರಿಕೆ ಸರಿಯೇ?
ರಾಜ್ಯದುದ್ದಗಲಕ್ಕೂ ಕೋಟ್ಯಂತರ ಅಂಗಡಿ-ಮುಂಗಟ್ಟುಗಳ ನಾಮಫಲಕಗಳೆಲ್ಲ ಅನ್ಯ ಭಾಷೆಗಳಲ್ಲೇ ರಾರಾಜಿಸುತ್ತಿವೆ. ಈ ಕುರಿತು ಹಲವು ಕನ್ನಡಪರ ಸಂಘಟನೆಗಳೆಲ್ಲ ಬೀದಿಗಿಳಿದು ಪ್ರತಿಭಟಿಸಿದರೂ ಈ ಬಗ್ಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ ಈ ಕೂಡಲೇ ರಾಜ್ಯ ಸರಕಾರವು ಕರ್ನಾಟಕ ರಾಜ್ಯದಾದ್ಯಂತ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಿ, ಪ್ರಸಕ್ತ ವರ್ಷದಿಂದಲೇ ‘ಕನ್ನಡ ಭಾಷಾ ದಿವಸ’ ಆಚರಿಸಲು ಮುಂದಡಿ ಇಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)