varthabharthiರಾಷ್ಟ್ರೀಯ

ಪಕ್ಷದ ಕಚೇರಿ ಹೊರಗೆ ಮುಖಂಡರ ಎದುರಲ್ಲೇ ಪತ್ನಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ನಾಯಕ !

ವಾರ್ತಾ ಭಾರತಿ : 19 Sep, 2019

ಹೊಸದಿಲ್ಲಿ, ಸೆ.19: ದಿಲ್ಲಿಯ ಬಿಜೆಪಿ ನಾಯಕ ಆಝಾದ್ ಸಿಂಗ್ ಅವರು ಪಕ್ಷದ ಕಚೇರಿಯ ಹೊರಗೆ ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿಯೇ ತನ್ನ ಪತ್ನಿಗೆ ಕಪಾಳಮೋಕ್ಷ ಮಾಡಿರುವ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರಿಂದ ಮುಜುಗರಗೊಂಡಿರುವ ಪಕ್ಷವು ಅವರನ್ನು ಮೆಹರೌಲಿ ಜಿಲ್ಲಾ ಬಿಜೆಪಿ ಘಟಕದ ಮುಖ್ಯಸ್ಥನ ಹುದ್ದೆಯಿಂದ ವಜಾ ಮಾಡಿದೆ.

ಪತ್ರಕರ್ತ ಅನೀಷ್ ಸಿಂಗ್ ಅವರು ಮೊದಲು ವೀಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಕ್ಷಣಾರ್ಧದಲ್ಲಿ ವೈರಲ್ ಆಗಿ ಸಾಮಾಜಿಕ ಮಾಧ್ಯಮ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

"ಹೆಚ್ಚಿನ ಬಿಜೆಪಿ ನಾಯಕರೆಲ್ಲ ಒಂದೇ. ಸಭ್ಯತೆಯಿಲ್ಲದ, ಬೀದಿಗಳಲ್ಲಿ ಹೊಡೆದಾಡುವ ಠಕ್ಕರು ಮತ್ತು ಸ್ತ್ರೀವ್ಯಾಮೋಹಿಗಳಾಗಿದ್ದಾರೆ. ಅವರಿಗೆ ನಾಚಿಕೆಯೂ ಇಲ್ಲ’ ಎಂದು ಪಲಕ್ ಶರ್ಮಾ ಎನ್ನುವವರು ಟ್ವಿಟರ್ ಬಾಣ ಬಿಟ್ಟಿದ್ದರೆ, ‘ಎಷ್ಟೊಂದು ನಾಚಿಕೆಗೇಡು! ಇದು ಬಿಜೆಪಿಯ ಮಹಿಳಾ ಸಬಲೀಕರಣ ’ಎಂದು ಶಕಿಲ್ ಎನ್ನುವವರು ವ್ಯಂಗ್ಯವಾಡಿದ್ದಾರೆ.

ಇಷ್ಟಕ್ಕೂ ಸಿಂಗ್ ಮತ್ತು ಅವರ ಪತ್ನಿ ಜಗಳವಾಡಿದ್ದು ಏಕೆ ಎನ್ನುವುದು ಸ್ಪಷ್ಟವಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)