varthabharthi

ಸಿನಿಮಾ

ವೆಬ್‌ಸರಣಿಯಲ್ಲಿ ಕಾಜೋಲ್

ವಾರ್ತಾ ಭಾರತಿ : 21 Sep, 2019

90ರ ದಶಕದಲ್ಲಿ ಬಾಲಿವುಡ್‌ನ ಅಗ್ರಮಾನ್ಯ ನಟಿಯಾಗಿ ಮೆರೆದಿದ್ದ ಕಾಜೋಲ್ ಸದ್ಯ ಸಿನೆಮಾದಲ್ಲಿ ನಟಿಸುವುದನ್ನು ಕಡಿಮೆ ಮಾಡಿರಬಹುದು. ಆದರೆ ಈಗಲೂ ಆಕೆ ತನ್ನ ವರ್ಚಸ್ಸನ್ನು ಹಿಂದಿನಂತೆಯೇ ಉಳಿಸಿಕೊಂಡು ಬಂದಿದ್ದಾರೆ. ಬದಲಾಗುತ್ತಿರುವ ಸಮಯದ ಜೊತೆ ತನ್ನ ಪಾತ್ರಗಳ ಆಯ್ಕೆಯಲ್ಲೂ ಬದಲಾವಣೆ ಮಾಡಿಕೊಂಡಿರುವ ಕಾಜೋಲ್ ಸದ್ಯ ತನಗೊಪ್ಪುವ ಪಾತ್ರಗಳಲ್ಲಷ್ಟೇ ನಟಿಸಲು ಒಪ್ಪುತ್ತಿದ್ದಾರೆ. ಕೊನೆಯ ಬಾರಿ ಹೆಲಿಕಾಪ್ಟರ್ ಈಲಾ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಕಾಜೋಲ್ ಅದರಲ್ಲಿ ತನ್ನ ಶಿಕ್ಷಣ ಸಂಪೂರ್ಣಗೊಳಿಸಲು ಮಗನ ಜೊತೆ ಕಾಲೇಜಿಗೆ ಮರುಸೇರ್ಪಡೆಗೊಳ್ಳುವ ತಾಯಿಯಾಗಿ ನಟಿಸಿದ್ದರು. ಅವರ ಮುಂದಿನ ಚಿತ್ರದಲ್ಲಿ ಆಕೆ ತನ್ನ ಪತಿ ಅಜಯ್ ದೇವಗನ್ ಜೊತೆ ನಟಿಸುತ್ತಿದ್ದಾರೆ. ತಾನಾಜಿ ಹೆಸರಿನ ಈ ಚಿತ್ರದಲ್ಲಿ ಕಾಜೋಲ್ ಲಕ್ಷ್ಮೀ ಬಾಯಿ ಪಾತ್ರ ನಿಭಾಯಿಸುತ್ತಿದ್ದಾರೆ. ಅದು ಮಾತ್ರವಲ್ಲದೆ ಕಾಜೋಲ್ ವೆಬ್ ಸರಣಿಯೊಂದರಲ್ಲೂ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಖ್ಯಾತ ಒಡಿಸ್ಸಿ ಜನಪದ ನೃತ್ಯಗಾತಿಯ ಕುರಿತ ಈ ವೆಬ್ ಸರಣಿಯನ್ನು ರೇಣುಕಾ ಶಹಾನೆ ನಿರ್ದೇಶಿಸುತ್ತಿದ್ದು ಅಜಯ್ ದೇವಗನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಯಾವುದೇ ವೇದಿಕೆಯಾಗಲಿ ನಟನೆಯ ವಿಷಯ ಬಂದಾಗ ಕಾಜೋಲ್ ಎಲ್ಲೂ ಸಲ್ಲುತ್ತಾರೆ ಎನ್ನುವುದು ಅವರ ಆಪ್ತರ ಅಭಿಪ್ರಾಯವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)