varthabharthi

ನಿಧನ

ಕಡೆಕಾರು ಪುಂಡಲೀಕ ಶೆಣೈ

ವಾರ್ತಾ ಭಾರತಿ : 21 Sep, 2019

ಉಡುಪಿ, ಸೆ.21: ಕಡೆಕಾರು ಶೆಣೈ ಮನೆತನದ ಹಿರಿಯರಾದ ಕಡೆಕಾರು ಪುಂಡಲೀಕ ಶೆಣೈ (82) ಇವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಕಲ್ಯಾಣಪುರದ ಗೊರಟ್ಟಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ಇವರು ಬಳಿಕ ಅಮೇರಿಕಾದಲ್ಲಿ ದೀರ್ಘ ಕಾಲ ಉದ್ಯೋಗ ನಿರ್ವಹಿಸಿ ಕಳೆದ 10 ವರ್ಷಗಳಿಂದ ಬ್ರಹ್ಮಗಿರಿಯಲ್ಲಿ ವಾಸಿಸುತಿದ್ದರು. ಕಲಾ ಪ್ರೇಮಿಯಾದ ಇವರು ಉಡುಪಿ ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದು ಕಲಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ಕಡೆಕಾರು ದೇವರಕೆರೆ ಪುನರ್ ನಿರ್ಮಾಣದಲ್ಲೂ ನೆರವಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)