ಪಾಕಿಸ್ತಾನ ತಂಡ ಪ್ರಕಟ: ಹಫೀಝ್ಗೆ ಸ್ಥಾನವಿಲ್ಲ
ಲಾಹೋರ್, ಸೆ.21: ಮುಂದಿನ ವಾರ ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ಆರಂಭವಾಗಲಿರುವ ಸರಣಿಗೆ ಪಾಕಿಸ್ತಾನ ತಂಡ ಶನಿವಾರ ತಂಡವನ್ನು ಪ್ರಕಟಿಸಿದೆ. 2009ರಲ್ಲಿ ಉಗ್ರರ ದಾಳಿ ನಡೆದ ಬಳಿಕ ಲಂಕಾ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುತ್ತಿದೆ.
ವಿಶ್ವಕಪ್ನಲ್ಲಿ 5ನೇ ಸ್ಥಾನ ಪಡೆದಿದ್ದ ಪಾಕ್ ತಂಡದ ಭಾಗವಾಗಿದ್ದ 38 ವಯಸ್ಸಿನ ಮುಹಮ್ಮದ್ ಹಫೀಝ್ರನ್ನು ತಂಡದಿಂದ ಕೈಬಿಡಲಾಗಿದೆ. ಹಫೀಝ್ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ವ್ಯಸ್ತರಾಗಿದ್ದಾರೆ.
ವಿಶ್ವಕಪ್ ತಂಡದಲ್ಲಿದ್ದ ಹಸನ್ ಅಲಿ ಹಾಗೂ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿಯನ್ನು ಕಳಪೆ ಫಿಟ್ನೆಸ್ ಕಾರಣದಿಂದ ಕೈಬಿಡಲಾಗಿದೆ. ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಪಾಕ್ ತಂಡವನ್ನು ಸರ್ಫರಾಝ್ ಅಹ್ಮದ್ ನಾಯಕನಾಗಿ ಮುನ್ನಡೆಸಲಿದ್ದಾರೆ.
4 ವರ್ಷಗಳ ಅಂತರದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಇಫ್ತಿಖಾರ್ ಅಹ್ಮದ್ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ.
Next Story