varthabharthiಕರಾವಳಿ

ರಾಮಕೃಷ್ಣ ಮಿಷನ್‌ನ ಸ್ವಚ್ಛತಾ ಅಭಿಯಾನ

ವಾರ್ತಾ ಭಾರತಿ : 22 Sep, 2019

ಮಂಗಳೂರು, ಸೆ.22: ನಗರದ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛತಾ ಅಭಿಯಾನದ 5ನೇ ಹಂತದ 42ನೇ ಸ್ವಚ್ಛ ಕಾರ್ಯಕ್ರಮವು ರವಿವಾರ ನಗರದ ಕಪಿತಾನಿಯೋ ಹಾಗೂ ದೇರೆಬೈಲ್ ಪರಿಸರಗಳಲ್ಲಿ ಜರುಗಿತು.

ಕಪಿತಾನಿಯೋ ಶಾಲೆಯ ಬಳಿ ಮರೋಳಿಯ ಶ್ರೀಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರು ಬಾಲಕೃಷ್ಣ ಕೊಟ್ಟಾರಿ ಹಾಗೂ ಡಾ. ರಾಹುಲ್ ತೋನ್ಸೆ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ದೇರೆಬೈಲ್ ಚರ್ಚ್ ಹಾಲ್ ಮುಂದೆ ಫಾ. ಆಸ್ಟೀನ್ ಪ್ಯಾರಿಸ್ ಹಾಗೂ ಬೇಲ್ಜಿಯಂ ಪ್ರಜೆ ಆ್ಯನ್ ಕಾರ್ಡಿನಲ್ ಜಂಟಿಯಾಗಿ ಉದ್ಘಾಟಿಸಿದರು.

ಈ ಸಂದರ್ಭ ಶ್ರೀಕಾಂತ ರಾವ್, ಎಡ್ವರ್ಡ್ ಕೊಯಿಲೋ, ಲಿಜ್ಜಿ ಫೆರ್ನಾಂಡಿಸ್, ವಿನಯ ಡಿಸೋಜ, ವಿನಯ ಪೂಜಾರಾಜ್, ನಳಿನಿ ಭಟ್, ಲೋಕೇಶ್ ಕೊಟ್ಟಾರ್, ಸುಜಿತ್ ಭಂಡಾರಿ, ಸುಭದ್ರಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಅಗಸ್ಟಿನ್ ಆಲ್ಮೇಡ್ ಮಹಾತ್ಮಾ ಗಾಂಧಿಜಿ ಯವರ ವೇಷ ಧರಿಸಿಕೊಂಡು ಶ್ರಮದಾನದಲ್ಲಿ ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)