ಜಾನ್ ಡಿಮೆಲ್ಲೋ
ಕುಂದಾಪುರ, ಸೆ.22: ಖ್ಯಾತ ಬೋಟ್ ತಯಾರಿಕಾ ಸಂಸ್ಥೆ ಗ್ರೀನ್ ಲ್ಯಾಂಡ್ ಮರೇನ್ ಮಾಲಕ ಬಾರಕೂರು ಮೂಲದ ಜಾನ್ ಡಿಮೆಲ್ಲೋ(72) ಹೃದಯಾಘಾತದಿಂದ ಮುಂಬೈಯ ಆಸ್ಪತ್ರೆಯಲ್ಲಿ ರವಿವಾರ ಮುಂಜಾನೆ ನಿಧನರಾದರು.
ಇವರು ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದು, ಮುಂಬೈಯಲ್ಲಿ ಹೆಲ್ಮೇಟ್ ಹಾಗೂ ಪೈಬರ್ ಬೋಟ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದರು. 90ರ ದಶಕದಲ್ಲಿ ಕುಂದಾಪರದಲ್ಲಿ ಸೌತ್ ಕೋಸ್ಟ್ ಸಂಸ್ಥೆಯ ಮೂಲಕ ಪೈಬರ್ ಗ್ಲಾಸ್ ಉತ್ಪನ್ನವನ್ನು ಪ್ರಥಮವಾಗಿ ಪರಿಚಯಿಸಿದ ಹೆಗ್ಗಳಿಕೆ ಇವರದ್ದು. ನಂತರ ಇವರು ಕುಂದಾಪುರದ ಮುವತ್ತು ಮುಡಿಯಲ್ಲಿ ಗ್ರೀನ್ ಲ್ಯಾಂಡ್ ಮರೇನ್ ಹೆಸರಿನ ಪೈಬರ್ ಬೋಟ್ ಉತ್ಪಾದನಾ ಘಟಕವನ್ನು ಆರಂಭಿಸಿದರು. ಇವರು ಪತ್ನಿ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story