varthabharthiಕರ್ನಾಟಕ

ಪ್ರಧಾನಿಯ ಸರಳತೆ ಕೊಂಡಾಡಿದ ಸಂಸದ ಪ್ರತಾಪ್ ಗೆ ನೆರೆ ಪರಿಹಾರ ಬಂದಿಲ್ಲ ಎಂದು ನೆನಪಿಸಿದ ಕನ್ನಡಿಗರು !

ವಾರ್ತಾ ಭಾರತಿ : 22 Sep, 2019

ಬೆಂಗಳೂರು, ಸೆ.22: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತನಗೆ ಅರ್ಪಿಸಲಾದ ಪುಷ್ಪಗುಚ್ಚದಿಂದ ಕೆಳಕ್ಕೆ ಉದುರಿದ ಹೂವನ್ನು ಎತ್ತಿಕೊಳ್ಳುವ ವಿಡಿಯೋ ಒಂದನ್ನು ಸಂಸದ ಪ್ರತಾಪ್ ಸಿಂಹ ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಮೋದಿ ಅವರ ಸ್ವಚ್ಛತೆಯ ಪಾಠವನ್ನು ಶ್ಲಾಘಿಸಿದ್ದಾರೆ. ಆದರೆ ನೆಟ್ಟಿಗರು ಪ್ರತಾಪ್ ಸಿಂಹ ಮಾಡಿದ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರಕಾರದಿಂದ ನೆರೆ ಪರಿಹಾರದ ದೊರಕದ ಬಗ್ಗೆ ಸಂಸದರಿಗೆ ನೆನಪಿಸಿದ್ದಾರೆ.

ಶನಿವಾರ ಅಮೇರಿಕಾದ ಹ್ಯೂಸ್ಟನ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದಾಗ, ಅವರಿಗೆ ಅರ್ಪಿಸಲಾದ ಪುಷ್ಪಗುಚ್ಚದಿಂದ ಕೆಳಕ್ಕೆ ಉದುರಿದ ಹೂವನ್ನು ಎತ್ತಿಕೊಳ್ಳುವ ಮೂಲಕ ಸರಳತೆ ಮೆರೆದಿದ್ದು, ಈ ಬಗ್ಗೆ ಮೋದಿ ಅವರ ಸ್ವಚ್ಛತೆಯ ಪಾಠವನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಹಂಚುವ ಮೂಲಕ ಶ್ಲಾಘಿಸಿದ್ದಾರೆ. ಈ ಪೈಕಿ ಸಂಸದ ಪ್ರತಾಪ್ ಸಿಂಹ ಅವರು "ಏರ್‌ಪೋರ್ಟ್‌ನಲ್ಲಿ ತಮ್ಮ ವಿನಮ್ರ ನಡೆಯಿಂದ ಜನಮನ ಗೆದ್ದ ಮೋದಿಜೀ..! ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಜೀ ದೇಶ-ವಿದೇಶಗಳಲ್ಲಿ ಪ್ರಖ್ಯಾತರಾಗಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳಿಗೂ ಪಾತ್ರವಾಗಿದ್ದಾರೆ. ಮೋದಿಜೀ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪರಿಸರ ಸ್ವಚ್ಚತೆಯನ್ನು ಅಕ್ಷರಶಃ ಪಾಲಿಸುತ್ತಾರೆ ಎಂಬುದಕ್ಕೆ ಅಮೆರಿಕದ ಹೌಸ್ಟನ್ ನಗರದ ವಿಮಾನ ನಿಲ್ದಾಣದಲ್ಲಿ ನಡೆದ ಸ್ವಚ್ಛತೆಯ ವಿನಮ್ರ ಸಂಗತಿಯೊಂದು ಸಾಕ್ಷಿಯಾಗಿದೆ ಎಂದು ಪೋಸ್ಟ್ ಮಾಡಿದ್ದರು. ಆದರೆ ನೆಟ್ಟಿಗರು ಅವರ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸಂಸದರು ಯಾವಾಗಲೂ ಮೋದಿಯನ್ನು ಹೊಗಳಲು ಮಾತ್ರ ಸೀಮಿತವಾಗಿರಬಾರದು...ನಮ್ಮ ರಾಜ್ಯದ 25 ಸಂಸದರಲ್ಲಿ ನೀವೂ ಒಬ್ಬರು ... ಪ್ರವಾಹ ಪರಿಹಾರದ ಬಗ್ಗೆ ಪ್ರಶ್ನಿಸಲು ಧೈರ್ಯವನ್ನು ತೋರಿಸಿ... ಮಹಾದಾಯಿ.. ಕಾವೇರಿ ಇತ್ಯಾದಿ' ಎಂದು ಕಮೆಂಟ್ ಮಾಡಿದ್ದಾರೆ.

"ಮೊದಲು ಪರಿಹಾರ ಕೊಡಿಸಿ, ಅಮೇಲೆ ಹೊಗಳು. ಒಂದು ತಿಂಗಳು ಆಯಿತು. ನಮ್ಮ ದೇಶಾದ ಜನರ ಮತ ಬೇಡವೇ? ಬೇರೆ ದೇಶದ ಜನರ ಮತ ಬೇಕಾ ಎಂದು ಪ್ರಶ್ನಿಸಿದ್ದಾರೆ. "ಮೊದಲು ಪರಿಹಾರ ಘೋಷಣೆ ಮಾಡೋಕೆ ಮನವಿ ಮಾಡಿ", "ಯಾಕೆ ಕೇಂದ್ರ ಸರಕಾರ ಪ್ರವಾಹ ಪೀಡಿತರಿಗೆ ಸಹಾಯ ಮಾಡುತ್ತಿಲ್ಲ. ಯಾಕೆ ಕಿವುಡಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ ನಿಸ್ಸಹಾಯಕ. ಸರಕಾರ ರಾಜ್ಯಕ್ಕೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ"

"ಜಿಡಿಪಿ ಹೋದರೂ ಪರವಾಗಿಲ್ಲ, ನಮ್ಮ ಯುವಕರಿಗೆ ಕೆಲಸ ಸಿಗದೇ ಹೋದರೂ ಪರವಾಗಿಲ್ಲ, ಇದೆಲ್ಲ ಗಿಮಿಕ್ ಚೆನ್ನಾಗ್ ಮಾಡ್ತೀರಾ", "ಹೊಗಲಿಕೆ ಸಾಕು ...ನೆರೆ ಪರಿಹಾರ ಬೇಕು", "ಉತ್ತರ ಕರ್ನಾಟಕದ ಪ್ರವಾಹ ಪೀಡಿತರ ಬಗ್ಗೆ ಹೇಳಿಕೆ ನೀಡಲು ಅವರು ಸೌಜನ್ಯವನ್ನು ಹೊಂದಿಲ್ಲ ಮತ್ತು ಯಾವುದೇ ಪರಿಹಾರ ಬಿಡುಗಡೆ ಮಾಡಿಲ್ಲ. ಆದರೆ ಅವರು ಶೀಘ್ರದಲ್ಲೇ ಹಣವನ್ನು ಬಿಡುಗಡೆ ಮಾಡುತ್ತಾರೆ. ಯಾಕೆಂದರೆ ಚುನಾವಣೆ ಬರುತ್ತಿದೆ" ಎಂದು ಕುಟುಕಿದ್ದಾರೆ.

ಇವುಗಳಲ್ಲಿ ಕೆಲ ಕಾಮೆಂಟ್ ಗಳು ಈ ಕೆಳಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)