varthabharthi


ಅಂತಾರಾಷ್ಟ್ರೀಯ

ಪಾಕ್: ಬಸ್ ದುರಂತಕ್ಕೆ 26 ಬಲಿ

ವಾರ್ತಾ ಭಾರತಿ : 22 Sep, 2019

ಪೇಶಾವರ,ಸೆ.22:ಪಾಕಿಸ್ತಾನದ ವಾಯವ್ಯ ಪ್ರಾಂತದ ಪರ್ವತ ಪ್ರದೇಶದಲ್ಲಿ ಬಸ್ಸೊಂದು ರಸ್ತೆಯ ತಿರುವಿನಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬೆಟ್ಟಕ್ಕೆ ಡಿಕ್ಕಿ ಹೊಡೆದು, ಸಂಭವಿಸಿದ ಅವಘಡದಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 26 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 13 ಮಂದಿ ಗಾಯಗೊಂಡಿದ್ದಾರೆ.

ಗಿಲ್ಗಿಟ್-ಬಾಲ್ಟಿಸ್ತಾನದ ಖೈಬರ್ ಪಖ್ತೂನ್‌ಖಾವಾ ಪ್ರಾಂತದ ಗಡಿಯಲ್ಲಿರುವ ಬಾಬುಸಾರ್ ಟಾಪ್ ಎಂಬಲ್ಲಿ ಈ ಅವಘಡ ಸಂಭವಿಸಿದೆ.

 ಅಪಘಾತಕ್ಕೀಡಾದ ಬಸ್, ರಾವಲ್ಪಿಂಡಿಯಿಂದ ಸ್ಕಾರ್ಡು ನಗರಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಬಸ್ಸಿನಲ್ಲಿ 16 ಮಂದಿ ಪಾಕ್ ಸೇನಾ ಸಿಬ್ಬಂದಿ ಸೇರಿದಂತೆ 40 ಮಂದಿ ಪ್ರಯಾಣಿಕರಿದ್ದರು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

 13 ಮಂದಿ ಗಾಯಾಳುಗಳನ್ನು ಚಿಲ್ಲಾಸ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಲಾಗಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)