varthabharthi

ಕರಾವಳಿ

ತುಂಬೆ: ಎಸ್ಡಿಪಿಐ ವತಿಯಿಂದ ಸ್ಕಾಲರ್ಶಿಪ್ ಮತ್ತು ಮತದಾರ ಪಟ್ಟಿಗೆ ಸೇರ್ಪಡೆ ಅಭಿಯಾನ

ವಾರ್ತಾ ಭಾರತಿ : 22 Sep, 2019

ಪರಂಗಿಪೇಟೆ, ಸೆ.22: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತುಂಬೆ ಗ್ರಾಮ ಸಮಿತಿ ವತಿಯಿಂದ ಅಲ್ಪಸಂಖ್ಯಾತ ವಿಧ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸೇವೆ ಮತ್ತು ಸಾರ್ವಜನಿಕರಿಗಾಗಿ ಮತದಾರ ಪಟ್ಟಿಗೆ ಸೇರ್ಪಡೆ ಅಭಿಯಾನ ಕಾರ್ಯಕ್ರಮವು ರವಿವಾರ ತುಂಬೆ ಮಸೀದಿಯ ಬಳಿ ನಡೆಯಿತು.

ಅಭಿಯಾನದಲ್ಲಿ ಎಸ್ಡಿಪಿಐ ತುಂಬೆ ಗ್ರಾಮ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ , ಪ್ರಧಾನ ಕಾರ್ಯದರ್ಶಿ ಮೂಸಬ್ಬ, ಸಾಮಾಜಿಕ ಕಾರ್ಯಕರ್ತರಾದ ಇರ್ಫಾನ್ ತುಂಬೆ, ಅಕ್ಬರ್ ವಳವೂರು ಹಾಗೂ ತುಂಬೆ ಗ್ರಾಮ ಪಂಚಾಯಿತ್  ಸದಸ್ಯರಾದ ಝಹೂರ್ ಅಹ್ಮದ್ ರವರು ಭಾಗವಹಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)