varthabharthiನಿಮ್ಮ ಅಂಕಣ

ಅನರ್ಹ ಶಾಸಕರ ಮುಂದಿನ ನಡೆ ಏನು?

ವಾರ್ತಾ ಭಾರತಿ : 22 Sep, 2019
ಸದ್ದಾಂಹುಸೇನ ಬಿ.ಬಳಗಾನೂರ ಗಣಿಹಾರ, ವಿಜಯಪುರ.

ಮಾನ್ಯರೇ,

ಸಮ್ಮಿಶ್ರ ಸರಕಾರ ಪತನವಾಗಲು ಕಾರಣರಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಅ.21ರಂದು ಉಪ ಚುನಾವಣೆ ಘೋಷಣೆಗೆ ಆದೇಶ ನೀಡಿದೆ. ಈ 17 ಶಾಸಕರ ಮತಕ್ಷೇತ್ರದ ಪೈಕಿ 15 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಂಡ ಶಾಸಕರು ಈ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ 17 ಶಾಸಕರನ್ನು 15ನೇ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅನರ್ಹಗೊಳಿಸಿದ್ದರು. ಆದರೆ ತಕ್ಷಣ ಚುನಾವಣೆ ಘೋಷಣೆಯಾದ ಬಳಿಕ ಅನರ್ಹ ಶಾಸಕರಲ್ಲಿ ಭಯದ ವಾತಾವರಣ ಕಂಡುಬರುತ್ತಿದೆ. ಏಕೆಂದರೆ ಅವರು ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅವರುಬಿಜೆಪಿ ಪಕ್ಷದ ಮೊರೆ ಹೋಗಿದ್ದಾರೆ. ಈ ಶಾಸಕರಿಗೆ ಎಲ್ಲೂ ನೆಲೆಯಿಲ್ಲದಂತಾಗಿದೆ. ಅನರ್ಹರಿಗೆ ಪುನಃ ತಮ್ಮ ಪಕ್ಷಕ್ಕೆ ಮರಳಲು ಯಾವುದೇ ಅವಕಾಶಗಳಿಲ್ಲ. ಅವರು ಈ ಉಪಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಹಾಗಾದರೆ ಅವರಿಗೆ ಮುಂದಿನ ದಾರಿ ಯಾವುದು? ನಂಬಿ ಬಂದ ಪಕ್ಷ ಅವರಿಗೆ ಮೋಸ ಮಾಡಿದೆಯಾ? ಅವರು ಎಡವಿದ್ದಾದರೂ ಎಲ್ಲಿ? ಇದಕ್ಕೆಲ್ಲ ಕಾರಣೀಕರ್ತರು ಯಾರೂ? ಅನರ್ಹ ಶಾಸಕರ ಪರವಾಗಿ ನಿಲ್ಲುವವರಾದರೂ ಯಾರು? ಹಿಂದೆ ಇದ್ದ ಪಕ್ಷದಲ್ಲಿ ಇವರಿಗೆ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲ. ಈಗ ಸ್ಪರ್ಧಿಸಲು ಯಾವ ಪಕ್ಷ ಎನ್ನುವುದು ಖಾತ್ರಿ ಇಲ್ಲ. ಇಂದು ನ್ಯಾಯಾಲಯದಲ್ಲಿ ಅನರ್ಹ ಶಾಸಕರ ಬಗ್ಗೆ ಅರ್ಜಿ ವಿಚಾರಣೆ ಇದೆ. ನ್ಯಾಯಾಲಯದ ವಿಚಾರಣೆ ನಂತರ ಇವರ ಭವಿಷ್ಯ ಏನಾಗಲಿದೆ ಎಂಬುದು ಗೊತ್ತಾಗುತ್ತದೆ. ನ್ಯಾಯಾಲಯದ ತೀರ್ಪು ಅನರ್ಹ ಶಾಸಕರ ಪರವಾಗಿ ಅಥವಾ ವಿರೋಧವಾಗಿ ಬರುತ್ತದೆಯೋ ಕಾದು ನೋಡಬೇಕಾಗಿದೆ. ಆಗ ಮಾತ್ರ ಇವರ ಭವಿಷ್ಯ ನಿರ್ಧಾರವಾಗುತ್ತದೆ.  

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)