varthabharthi


ಓ ಮೆಣಸೇ

ಓ ಮೆಣಸೇ…

ವಾರ್ತಾ ಭಾರತಿ : 22 Sep, 2019
ಪಿ.ಎ.ರೈ

 ಕಾಶ್ಮೀರಿಗಳನ್ನು ಆಲಂಗಿಸಿಕೊಳ್ಳಬೇಕು
- ಪ್ರಧಾನಿ ಮೋದಿ

ಸಾರ್, ಸ್ವಲ್ಪ ವಿವರಿಸಿ ಹೇಳಿ, ಇದು ಅತ್ಯಾಚಾರಕ್ಕೆ ಪ್ರೇರಣೆ ಎಂದು ಅಲ್ಲಿಯ ಕೆಲವರು ದುರ್ವ್ಯಾಖ್ಯಾನಿಸಬಹುದು.

---------------------
  ಚಿನ್ಮಯಾನಂದ ಅತ್ಯಾಚಾರ ಪ್ರಕರಣ: ದೃಢ ಪುರಾವೆ ಇದ್ದರೆ ಮಾತ್ರ ಆರೋಪಿಯ ಬಂಧನ
- ವಿಶೇಷ ತನಿಖಾ ತಂಡದ ಪ್ರಕಟನೆ

ಹಾಗಾದರೆ ಇನ್ನು ಮುಂದೆ ಸ್ವತಃ ಅತ್ಯಾಚಾರ ಸಂತ್ರಸ್ತರೇ ಎಲ್ಲ ಘಟನೆಗಳನ್ನು ದಾಖಲಿಸಿ ಪುರಾವೆ ಒದಗಿಸಲು ಅವುಗಳ ವೀಡಿಯೊ ರೆಕಾರ್ಡಿಂಗ್ ಮಾಡಿಸಿಕೊಳ್ಳಬೇಕೇ?

---------------------
ಮಾನಸಿಕ ಅಸ್ವಸ್ಥರ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬೇಕು. - ಡಾ. ಹರ್ಷವರ್ಧನ್, ಕೇಂದ್ರ ಆರೋಗ್ಯ ಸಚಿವರು.

ಅಯ್ಯಯ್ಯೋ, ಹಾಗೆಲ್ಲಾ ಆದರೆ ಮತ್ತೆ ನಮ್ಮ ಸರಕಾರವನ್ನು ನಡೆಸುವುದಕ್ಕೆ ಬೇರೆ ಯಾರಿದ್ದಾರೆ?

---------------------

ಕನ್ನಡಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ - ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ,

ಕರ್ನಾಟಕ ಅಂದರೆ, ಪ್ರತಿಭಟನಾರ್ಥವಾಗಿ ರಾಜ್ಯದೆಲ್ಲೆಡೆ ಹಿಂದಿ ಮತ್ತು ಸಂಸ್ಕೃತವನ್ನು ಹೇರುತ್ತೇವೆ, ಹುಷಾರ್.

---------------------

ನನ್ನ ಆದ್ಯತೆ ಕನ್ನಡವೇ ಆಗಿದ್ದು, ಸಹಿಯನ್ನು ಕನ್ನಡದಲ್ಲೇ ಹಾಕುತ್ತೇನೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

  ಹಿಂದಿ ಭಾಷೆ ರಾಷ್ಟ್ರ ಭಾಷೆ ಎಂಬ ಆದೇಶಕ್ಕೆ ಕನ್ನಡದಲ್ಲಿ ಸಹಿ ಹಾಕಿದರೂ ಕನ್ನಡಕ್ಕೇನು ಲಾಭ?
---------------------

ಪಾಕಿಸ್ತಾನದ ನಿರ್ನಾಮವೇ ಮೋದಿ ಸರಕಾರದ ಉದ್ದೇಶ

- ಇಮ್ರಾನ್ ಖಾನ್, ಪಾಕ್ ಪ್ರಧಾನಿ 

ಪಾಕಿಸ್ತಾನದ ಹೆಸರು ಹೇಳಿ ಅವರು ಭಾರತವನ್ನು ನಿರ್ನಾಮ ಮಾಡುತ್ತಿರುವಂತಿದೆ.

---------------------

ದಕ್ಷಿಣ ಭಾರತೀಯರಿಗೆ ಧೈರ್ಯ ಕಡಿಮೆ

- ವಜುಭಾಯ್‌ವಾಲಾ, ರಾಜ್ಯಪಾಲ
ಹೌದು, ಆ ಧೈರ್ಯದಿಂದಲೇ ಕನ್ನಡಿಗರ ಮೇಲೆ ನೀವು ಸವಾರಿ ಮಾಡುತ್ತಿರುವುದು.

---------------------
ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಹಸಿವು ಸ್ಪಷ್ಟವಾಗಿ ಕಾಣುತ್ತಿವೆ

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ತಮ್ಮ ಗೋಶಾಲೆಗಳಲ್ಲಿರುವ ಗೋವುಗಳು ನಿಗೂಢವಾಗಿ ನಾಪತ್ತೆಯಾಗುತ್ತಿರುವುದಕ್ಕೂ ಈ ಹಸಿವಿಗೂ ಸಂಬಂಧವಿರಬಹುದೆ?

---------------------
ಮೈತ್ರಿ ಸರಕಾರ ಪತನಕ್ಕೆ ಶಾಸಕ ಸಾ.ರಾ. ಮಹೇಶ್ ಕಾರಣ

- ಎಚ್. ವಿಶ್ವನಾಥ್, ಅನರ್ಹ ಶಾಸಕ
  ತಾವು ಅನರ್ಹರಾಗುವುದಕ್ಕೆ ಯಾರು ಕಾರಣ?

---------------------

ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲ, ಜನರಲ್ಲಿ ಉದ್ಯೋಗಕ್ಕೆ ಬೇಕಾದ ಅರ್ಹತೆ ಇಲ್ಲ

- ಸಂತೋಷ ಗಂಗ್ವ್ವರ್, ಕೇಂದ್ರ ಸಚಿವ
ಅರ್ಹತೆ ಇಲ್ಲದವರನ್ನು ಆರಿಸಿ ಸಚಿವರನ್ನಾಗಿಸಿದರ ಪ್ರತಿಫಲ ಇದು.

---------------------
ಹಿಂದೂಗಳು ತಮಗೆ ಸಹಾಯ ಮಾಡಿದವರನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಆಡು, ನಾಯಿ, ದನ, ಮನುಷ್ಯ... ಯಾರೇ ಇರಬಹುದು

- ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಬ್ರಿಟಿಷರ ಜೊತೆ ಹಿಂದೂ ಮಹಾಸಭಾ ಕೈಜೋಡಿಸಿದ್ದು ಆ ಕಾರಣಕ್ಕೇ ಇರಬಹುದೇ?

---------------------
ನಾನು ಕಳೆದ 5 ದಶಕಗಳಿಂದ ಎದುರು ನೋಡುತ್ತಿದ್ದ 370ನೇ ವಿಧಿ ರದ್ದಾಗುವ ಕನಸನ್ನು ಪ್ರಧಾನಿ ಮೋದಿ ನನಸು ಮಾಡಿದ್ದಾರೆ

- ಡಾ.ಹರ್ಷವರ್ಧನ್, ಕೇಂದ್ರ ಸಚಿವ
ನಿಮ್ಮ ಕನಸು ನನಸು ಮಾಡುವುದಕ್ಕಾಗಿ ದೇಶದ ವಿಧಿಯನ್ನು ಬದಲಾಯಿಸುವುದೇ?

---------------------

ಉಗ್ರರ ಪೋಷಣೆಯಿಂದಲೇ ಪಾಕಿಸ್ತಾನ ಸರ್ವ ನಾಶವಾಗುತ್ತದೆ

- ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಭಾರತದೊಳಗಿರುವ ಕೇಸರಿ ಉಗ್ರರು ದೇಶವನ್ನು ರಕ್ಷಿಸುವುದಕ್ಕೆ ಇರುವವರೇ?

---------------------

ಭಾರತ ಸರಕಾರದೊಂದಿಗೆ ಸಂಪರ್ಕ ಹೊಂದಲು ದಕ್ಷಿಣದ ರಾಜ್ಯಗಳು ಹಿಂದಿ ಕಲಿಯಬೇಕು

- ಕಿರಣ್ ಬೇಡಿ, ಪುದುಚೇರಿ ಲೆಪ್ಟ್‌ನೆಂಟ್ ಗರ್ವನರ್
ಭಾರತ ಸರಕಾರವೇ ದಕ್ಷಿಣದ ರಾಜ್ಯಗಳ ಭಾಷೆಯನ್ನು ಕಲಿಯುವುದು ಅತ್ಯುತ್ತಮ.

---------------------

ಭಗವಂತ ನನ್ನ ಹಣೆಯಲ್ಲಿ ಡಿಸಿಎಂ ಹುದ್ದೆ ಬರೆದಿದ್ದ

- ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ
ಹಿಂದಿ ಭಾಷೆಯಲ್ಲೋ, ಸಂಸ್ಕೃತ ಭಾಷೆಯಲ್ಲೋ?

---------------------

ಹಿಂದಿ ಕಲಿತರೆ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು

- ಯೋಗಿ ಆದಿತ್ಯನಾಥ್, ಉ.ಪ. ಮುಖ್ಯಮಂತ್ರಿ
ಮತ್ತೇಕೆ ಉತ್ತರ ಭಾರತೀಯರು ಕೆಲಸ ಹುಡುಕಿಕೊಂಡು ದಕ್ಷಿಣಕ್ಕೆ ಬರುತ್ತಿರುವುದು?

---------------------

ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಿ ನನಗೆ ನೀಡಿದರು

- ನಳಿನ್‌ಕುಮಾರ್ ಕಟೀಲು, ಸಂಸದ
ಬಿಜೆಪಿಯನ್ನು ನಾಶ ಮಾಡಲು ನೀವೇ ಅತ್ಯುತ್ತಮ ವ್ಯಕ್ತಿ ಎಂದು ಅವರು ಭಾವಿಸಿರಬೇಕು.

---------------------

ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿ ಮಾಡಲಾಗುವುದು

- ಅಮಿತ್ ಶಾ, ಕೇಂದ್ರ ಸಚಿವ
ಮೊದಲು ಆರ್ಯನ್ನರ ಡಿಎನ್‌ಎ ಪರೀಕ್ಷಿಸಿ ಅವರನ್ನು ಹೊರಗಟ್ಟುವ ಕೆಲಸ ನಡೆದರೆ ಹೇಗೆ?

---------------------
ಕಾಂಗ್ರೆಸ್ ಮುಖಂಡರಿಗೆ ಹೋರಾಟ ಮಾಡಲು ಬರಲ್ಲ

- ರೇಣುಕಾಚಾರ್ಯ, ಶಾಸಕ
  ನಾಚಿಕೆ ಬಿಟ್ಟರೆ ಮಾತ್ರ ನಿಮ್ಮ ಥರ ಹೋರಾಟ ಮಾಡಲು ಸಾಧ್ಯ.

---------------------
ನಾನು ಮೂಲ ಕಾಂಗ್ರೆಸಿಗ, ನನ್ನನ್ನು ದೂರವಿಟ್ಟು ಪಕ್ಷ ಕಟ್ಟಲು ಸಾಧ್ಯವಿಲ್ಲ

- ಡಾ.ಜಿ. ಪರಮೇಶ್ವರ, ಮಾಜಿ ಉಪ ಮುಖ್ಯಮಂತ್ರಿ
ಕಾಂಗ್ರೆಸ್‌ನ ದೊಡ್ಡ ರೋಗ ಈ ಮೂಲಗಳು.

---------------------

ಮಹಾತ್ಮಾ ಗಾಂಧಿ ಭಾರತ ರಾಮ ರಾಜ್ಯವಾಗಬೇಕು ಎಂದಿದ್ದರೇ ವಿನಃ ಜಾತ್ಯತೀತ ರಾಷ್ಟ್ರವಾಗಬೇಕು ಎಂದು ಹೇಳಿಲ್ಲ

- ನಳಿನ್ ಕುಮಾರ್ ಕಟೀಲು, ಸಂಸದ
ಆದಕ್ಕಾಗಿಯೇ ಇರಬೇಕು, ಗಾಂಧಿಯನ್ನು ಸಂಘಪರಿವಾರ ಕೊಂದದ್ದು.

---------------------
 
ಹೋರಾಟ ಮಾಡುವುದರಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ

- ದೇವೇಗೌಡ, ಮಾಜಿ ಪ್ರಧಾನಿ
 
ಮಕ್ಕಳಿಗಾಗಿ ಹೋರಾಟ ಮಾಡುವುದರಲ್ಲಿ ತಾವು ಹಿಂದೆ ಬಿದ್ದಿಲ್ಲ ಎನ್ನುವುದು ದೇಶಕ್ಕೇ ಗೊತ್ತಿದೆ.

---------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು