varthabharthi

ರಾಷ್ಟ್ರೀಯ

ರಾಜಸ್ಥಾನದಲ್ಲಿ ಬಸ್ –ಟ್ರಕ್ ಢಿಕ್ಕಿ: 8 ಸಾವು

ವಾರ್ತಾ ಭಾರತಿ : 23 Sep, 2019

ಜೈಪುರ​, ಸೆ.23: ಬಸ್​ ಮತ್ತು ಟ್ರಕ್ ಪರಸ್ಪರ ಢಿಕ್ಕಿ ಹೊಡೆದು  ಸಂಭವಿಸಿದ ಅಪಘಾತದಲ್ಲಿ  8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಮಂದಿ  ಗಾಯಗೊಂಡಿರುವ ಘಟನೆ ರಾಜಸ್ಥಾನದ ಲಮಾನ ಗ್ರಾಮದಲ್ಲಿ ನಡೆದಿದೆ.

ಬಸ್ ನಲ್ಲಿದ್ದವರು ಬಹುತೇಕ ಮಂದಿ ದಿನಗೂಲಿ ಕಾರ್ಮಿಕರಾಗಿದ್ದು, ಗುಜರಾತ್ ನಿಂದ ಪಾಲಂಪುರ್ ಗೆ ಹೋಗುತ್ತಿದ್ದರು . ಬಸ್ ನಲ್ಲಿ ಒಟ್ಟು 85 ಮಂದಿ ಪ್ರಯಾಣಿಕರಿದ್ದರು. ಅಪಘಾತಕ್ಕೀಡಾದ ಬಸ್ ಜೈಪುರದಿಂದ ಗುಜರಾತ್ ಗೆ ತೆರಳುತ್ತಿತ್ತು. ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ಜವಾಹರ್ ಲಾಲ್ ನೆಹರೂ ಆಸ್ಪತ್ರೆಗೆ ದಾಖಲಿಸಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)