varthabharthi

ಕರಾವಳಿ

ಕೆ.ಜಿ.ಗೆ 55ರಿಂದ 70 ರೂ.ಗೆ ಏರಿಕೆ

ಮಂಗಳೂರಿನಲ್ಲೂ ದುಬಾರಿಯಾದ ಈರುಳ್ಳಿ!

ವಾರ್ತಾ ಭಾರತಿ : 23 Sep, 2019

ಮಂಗಳೂರು, ಸೆ.23: ದೇಶಾದ್ಯಂತ ಈರುಳ್ಳಿ ಬೆಲೆ ತೀವ್ರವಾಗಿ ಏರುತ್ತಿದಂತೆ ಮಂಗಳೂರು ನಗರದಲ್ಲೂ ಜನತೆಗೆ ಬೆಲೆಯೇರಿಕೆ ಬಿಸಿ ತಟ್ಟಲಾರಂಭಿಸಿದೆ.

 ಸೋಮವಾರ ಒಂದು ಕೆ.ಜಿ. ಈರುಳ್ಳಿಗೆ 50ರಿಂದ 70 ರೂ. ದರ ಏರಿಕೆಯಾಗಿದೆ. ಕೆಲವು ಅಂಗಡಿಗಳಲ್ಲಿ ಈರುಳ್ಳಿ 50 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿ ಬಹುಮಳಿಗೆಗಳನ್ನು ಹೊಂದಿರುವ ಉದ್ಯಮ ಸಂಸ್ಥೆಯೊಂದರ ಮಳಿಗೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಈರುಳ್ಳಿ ಬೆಲೆ ಕೆ.ಜಿ.ಗೆ 70 ರೂ. ದರಪಟ್ಟಿ ಹಾಕಿ ಮಾರಾಟ ಮಾಡಲಾಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)