varthabharthiರಾಷ್ಟ್ರೀಯ

2021ರಲ್ಲಿ ಮೊಬೈಲ್ ಆ್ಯಪ್ ಮೂಲಕ ಜನಗಣತಿ: ಅಮಿತ್ ಶಾ

ವಾರ್ತಾ ಭಾರತಿ : 23 Sep, 2019

ಹೊಸದಿಲ್ಲಿ, ಸೆ.23: ಭಾರತದಲ್ಲಿ 2021ರಲ್ಲಿ ನಡೆಯಲಿರುವ ಜನಗಣತಿಯು ಡಿಜಿಟಲ್ ಜನಗಣತಿಯಾಗಲಿದ್ದು, ಮೊಬೈಲ್ ಆ್ಯಪ್ ಮೂಲಕ ಈ ಜನಗಣತಿಗಾಗಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಜನಗಣತಿ ಪ್ರಾಧಿಕಾರದ ಕಚೇರಿ ಜಂಗನನ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾ ಮಾತನಾಡುತ್ತಿದ್ದರು.

ದೇಶದ ಮೊದಲ ಡಿಜಿಟಲ್ ಜನಗಣತಿಗೆ ರೂ.12,000 ಕೋಟಿ ವ್ಯಯಿಸಲಾಗುವುದು ಎಂದು ಶಾ ಹೇಳಿದರಲ್ಲದೆ, ಈ ಜನಗಣಿತ ಕಾರ್ಯಕ್ಕೆ 33 ಲಕ್ಷ ಸಿಬ್ಬಂದಿ ಸೇವೆಯನ್ನು ಬಳಸಲಾಗುವುದು ಎಂದಿದ್ದಾರೆ.

ದೇಶದಲ್ಲಿ ನಾಗರಿಕರಿಗೆ ಬಹು ಉಪಯೋಗಿ ಗುರುತು ಪತ್ರವನ್ನು (ಮಲ್ಟಿ ಯುಟಿಲಿಟಿ ಐಡಿ ಕಾರ್ಡ್) ನೀಡುವ ಪ್ರಸ್ತಾವವನ್ನೂ ಈ ಸಂದರ್ಭ ಮಾಡಿದ ಶಾ, ಈ ಗುರುತು ಪತ್ರದಲ್ಲಿ ನಾಗರಿಕರ ಪಾಸ್‌ಪೋರ್ಟ್, ಆಧಾರ್ ಹಾಗೂ ಮತದಾರರ ಗುರುತಪುತ್ರ ಒಳಗೊಳ್ಳುವುದು ಎಂದರು.
ಭಾರತದಲ್ಲಿ ಈ ಹಿಂದಿನ ಜನಗಣತಿಯನ್ನು 2011ರಲ್ಲಿ ನಡೆಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)