varthabharthi


ಕರಾವಳಿ

ಬಾಳ್ತಿಲ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಇಲಾಖಾ ಕಾರ್ಯಕ್ರಮ

ವಾರ್ತಾ ಭಾರತಿ : 23 Sep, 2019

ಬಂಟ್ವಾಳ, ಸೆ.23: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಗ್ರಾಮ ಪಂಚಾಯತ್ ಬಾಳ್ತಿಲ, ಸ್ತ್ರೀ ಶಕ್ತಿ ಗೊಂಚಲು ಬಾಳ್ತಿಲ, ಬ್ಯಾಂಕ್ ಆಫ್ ಬರೋಡಾ ಇದರ ಜಂಟಿ ಆಶ್ರಯದಲ್ಲಿ ಸದಸ್ಯರ ಸಭೆ, ಮಾಹಿತಿ ಕಾರ್ಯಾಗಾರ, ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಕೃಷಿ ಮತ್ತು ಸ್ವ-ಸಹಾಯ ಸಂಘಗಳ ಸಾಲಮೇಳ ಕಾರ್ಯಕ್ರಮ ಬಾಳ್ತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ತ್ರೀ ಶಕ್ತಿ ಎಂಬುದು ಸಂಘಟನೆಗೆ ಸೀಮಿತವಾಗದೇ ದೇಶದ ಆರ್ಥಿಕ ಬಲವರ್ಧನೆಗೆ ಪೂರಕವಾಗಬೇಕು. ಆರ್ಥಿಕ ಸದೃಢವಾಗಲು ಸ್ತ್ರೀ ಶಕ್ತಿ ಸಂಘಟನೆಯ ಪಾತ್ರ ಹಿರಿದು. ಅಡುಗೆ ಕೋಣೆಯಿಂದ ದೇಶದ ಸ್ವಚ್ಛತೆಯವರೆಗೆ ನಿಮ್ಮ ಸಹಭಾಗಿತ್ವ ಹಾಗೂ ಅವಲಂಬನೆ ಪ್ರಮುಖವಾಗಿರಲಿ ಎಂದು ಹೇಳಿದರು.

ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ ಮಾತನಾಡಿ, ಸ್ತ್ರೀ ಶಕ್ತಿಯ ಮೂಲಕ ಕುಟುಂಬವನ್ನು ಭದ್ರಪಡಿಸೋಣ, ಗುಂಪಿನ ಮೂಲಕ ಮಾಹಿತಿ ಪಡೆದು ಸಂಘಟಿತರಾಗೋಣ ಎಂದುಹೇಳಿದರು.

ಕೃಷಿ ಮತ್ತು ಸ್ವಸಹಾಯ ಸಂಘಗಳ ಸಾಲಮೇಳದ ಬಗ್ಗೆ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಡೆಪ್ಯುಟಿ ರೀಜನಲ್ ಮ್ಯಾನೇಜರ್ ಚಿದಾನಂದ ಹೆಗ್ಡೆ ಮಾಹಿತಿಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಗಾಯತ್ರಿ ಕಂಬಳಿ ಮಾತನಾಡಿದರು.

ವೇದಿಕೆಯಲ್ಲಿ ವೆಂಕಟರಾಯ ಪ್ರಭು, ಸುಂದರ ಸಾಲ್ಯಾನ್, ವೀಣಾ, ರಜನಿ, ರೇಣುಕಾ, ಗುಲಾಬಿ, ಬ್ಲಾಕ್ ಸೊಸೈಟಿ ಅಧ್ಯಕ್ಷೆ ಗೀತಾ ಜಯತೀರ್ಥ, ಕಾರ್ಯದರ್ಶಿ ಪ್ರಮೀಳಾ, ಅರೋಗ್ಯ ಇಲಾಖಾ ಸಿಬ್ಬಂದಿ ಉಷಾ, ಕಲ್ಲಡ್ಕ ಬರೋಡ ಬ್ಯಾಂಕ್ ಪ್ರಬಂಧಕ ಪ್ರಣಾಮ್ ಭಂಡಾರಿ, ಕಲ್ಲಡ್ಕ ಲಕ್ಷೀ ಗಣೇಶ್ ಮಾಲಕಿ ಪದ್ಮವಾತಿ ಹೊಳ್ಳ, ಬಾಳ್ತಿಲ ವಲಯ ಮೇಲ್ವಿಚಾರಕಿ ಶಾಲಿನಿ, ಬಾಳ್ತಿಲ ಗ್ರಾಪಂ ಪಿಡಿಒ ಸಂಧ್ಯಾ, ಮಹಿಳಾ ಮಂಡಳಿಯ ಅಧ್ಯಕ್ಷೆ ಕವಿತಾ ಅಡ್ಯಂತಾಯ ಶ್ರೀನಿಧಿ ಗೊಂಚಲಿನ ಅಧ್ಯಕ್ಷೆ ವೀಣಾ, ಗೌರವಾಧ್ಯಕ್ಷೆ ಪದ್ಮಿನಿ, ಕಾರ್ಯದರ್ಶಿ ಮಲ್ಲಿಕಾ, ಕೋಶಾಧಿಕಾರಿ ಶಾಲಿನಿ, ಜೊತೆ ಕಾರ್ಯದರ್ಶಿ ನೀತಾ, ದುರ್ಗಾಪರಮೇಶ್ವರಿ ಗೊಂಚಲಿನ ಅಧ್ಯಕ್ಷೆ ಭಾರತಿ, ಗೌರವಾಧ್ಯಕ್ಷೆ ಯಶೋಧಾ, ಕಾರ್ಯದರ್ಶಿ ರಕ್ಷಿತಾ, ಕೋಶಾಧಿಕಾರಿ ಸುಮಿತ್ರಾ, ಜೊತೆ ಕಾರ್ಯದರ್ಶಿ ಗೀತಾ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

ಉತ್ತಮ ಚಟುವಟಿಕೆಯ ಮೂಲಕ ಸಾಧನೆ ಮಾಡಿದ ವಿವಿಧ ಸ್ತ್ರೀಶಕ್ತಿಗಳ ಆಯ್ಕೆ ನಡೆಸಿ ಅಂತಹ ಗುಂಪುಗಳನ್ನು ಗೌರವಿಸಲಾಯಿತು. ಸ್ವಚ್ಛತೆ ಹಾಗೂ ಬಾಲ್ಯವಿವಾಹ ತಡೆಯ ಪ್ರಾತ್ಯಕ್ಷಿಕೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಲಲಿತಾ ಸ್ವಾಗತಿಸಿದರು. ಕಾರ್ಯಕರ್ತೆ ಸುರೇಖಾ ವಂದಿಸಿದರು. ಮೇಲ್ವಿಚಾರಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)