varthabharthi


ಕರಾವಳಿ

ವಿಟ್ಲ: ದಸರಾ ಕ್ರೀಡೋತ್ಸವ ಸಮಾರೋಪ ಸಮಾರಂಭ

ವಾರ್ತಾ ಭಾರತಿ : 23 Sep, 2019

ವಿಟ್ಲ, ಸೆ. 23: ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ವಿಟ್ಲ ವಲಯದ ಆಶ್ರಯದಲ್ಲಿ ನೆರೆ ಸಂತ್ರಸ್ತರ ಸಹಾಯನಿಧಿ ಪ್ರಯುಕ್ತ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟಗಳನ್ನೂಳಗೊಂಡ ದಸರಾ ಕ್ರೀಡೋತ್ಸವ ಸಮಾರೋಪ ಸಮಾರಂಭ ನಡೆಯಿತು. ಕಬಡ್ಡಿಯಲ್ಲಿ ಸಾಯಿ ಟೌನ್ ಕಿಚನ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. 

ಮನ್ಸೂರು ಫ್ರೆಂಡ್ಸ್ ಮುಂಬೈ ದ್ವಿತೀಯ ಸ್ಥಾನ ಪಡೆದುಕೊಂಡರೆ, ಪಿಂಕಿ ಪೂಂಜ ಸಿದ್ಧಕಟ್ಟೆ ಹಾಗೂ ಪಟ್ಲ ಫ್ರೆಂಡ್ಸ್ ಕಲ್ಲೇಗ ತೃತೀಯ ಹಾಗೂ ಚತುರ್ಥ ಪ್ರಶಸ್ತಿ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಟ್ಲ ಸರಕಾರಿ ಶಾಲೆಯ ಗೌರವಾಧ್ಯಕ್ಷ ಸುಬ್ರಾಯ ಪೈ, ಒಂದು ಕಾರ್ಯಕ್ರಮ ಯಶಸ್ವಿಗೊಳ್ಳಲು ಧ್ವನಿ ಹಾಗೂ ಬೆಳಕು ಮುಖ್ಯ ಪಾತ್ರ ವಹಿಸುತ್ತದೆ. ಕಾರ್ಯಕ್ರಮದ ಹಿಂದಿರುವ ಉದ್ದೇಶ ಶ್ಲಾಘನೀಯ ಎಂದರು. 

ಧ್ವನಿವರ್ಧಕ ಹಾಗೂ ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು ಅಧ್ಯಕ್ಷತೆ ವಹಿಸಿದ್ದರು. ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷ ಶೇಖ್ ಸುಭಾನ್ ಮುನ್ನ ಮಂಗಳಪದವು, ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಉಡುಪಿ ಜಿಲ್ಲಾ ಕಾರ್ಯದರ್ಶಿ ದಾಮೋದರ ಶೆಟ್ಟಿಗಾರ್, ಉದ್ಯಮಿ ಸಂತೋಷ್ ಕುಮಾರ್ ಪೂಂಜ, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ವಿಆರ್‍ಸಿ ಅಧ್ಯಕ್ಷ ರಮಾನಾಥ ವಿಟ್ಲ, ಶಮೀರ್ ಪಳಿಕೆ, ಮೈಕಲ್ ಡಿಕೋಸ್ತಾ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಬಂಟ್ವಾಳ ವಲಯ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಸುದರ್ಶನ್ ಜೈನ್, ಭಾರತ್ ಶಾಮಿಯಾನದ ಸಂಜೀವ ಪೂಜಾರಿ, ನಾಗೇಶ್ ಬಸವನಗುಡಿ, ಯುವ ಕೇಸರಿ ಅಧ್ಯಕ್ಷ ದಿವಾಕರ ಶೆಟ್ಟಿ ಅಬೀರಿ, ಇಕ್ಬಾಲ್ ರೆಡ್ ಶಾಮಿಯಾನ, ಪ್ರಶಾಂತ್ ಸಿದ್ಧಕಟ್ಟೆ, ತೀರ್ಪುಗಾರ ವಿದ್ಯಾಂಶಕರ್, ವಸಂತ, ಸುರೇಶ್ ಪಡಿಬಾಗಿಲು, ರೂಪೇಶ್ ಶೆಟ್ಟಿ

ಅಳಿಕೆ, ಮಹಮ್ಮದ್ ಮಾಣಿ ಮೊದಲಾದವರು ಉಪಸ್ಥಿತರಿದ್ದರು. 
ಇಸ್ಮಾಯಿಲ್ ಏರ್‍ಸೌಂಡ್ಸ್ ಪ್ರಸ್ತಾವಿಸಿದರು. ಅಶ್ವೀನ್ ಸ್ವಾಗತಿಸಿ, ವಂದಿಸಿದರು. ಮನ್ಮಥ ಶೆಟ್ಟಿ ಪುತ್ತೂರು ನಿರೂಪಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)