ಪ್ರಸಿದ್ಧ ತೆಲುಗು ಹಾಸ್ಯನಟ ವೇಣು ಮಾಧವ್ ನಿಧನ
ಹೊಸದಿಲ್ಲಿ, ಸೆ.25: ಪ್ರಸಿದ್ಧ ತೆಲುಗು ಹಾಸ್ಯನಟ ವೇಣು ಮಾಧವ್ ಇಂದು ಹೈದರಾಬಾದ್ ನಲ್ಲಿ ನಿಧನರಾಗಿದ್ದಾರೆ. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಸೆಪ್ಟಂಬರ್ 22ರಂದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1996ರಲ್ಲಿ ತೆರೆಕಂಡ ಸಂಪ್ರದಾಯಮ್ ಚಿತ್ರದ ಮೂಲಕ ಅವರು ಜನಪ್ರಿಯರಾದರು.
Next Story