varthabharthi

ವೈವಿಧ್ಯ

ಭಾರತದ ಯಾತನೆಗಳನ್ನು ಕಡೆಗಣಿಸಿದ ‘ಹೌಡಿ ಮೋದಿ’

ವಾರ್ತಾ ಭಾರತಿ : 28 Sep, 2019
ರಾಮ್ ಪುನಿಯಾನಿ

ಭಾರತವು ಈಗ ವಿಶೇಷವಾಗಿ ಕಳೆದ ಎರಡು ವರ್ಷಗಳಿಂದ ಒಂದು ರಾಷ್ಟ್ರವಾಗಿ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ಅಮೆರಿಕದಲ್ಲಿ ನಮ್ಮ ಪ್ರಧಾನಿಯವರು ಸಂಭ್ರಮದಿಂದ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವಾಗ ಭಾರತದ ಆರ್ಥಿಕತೆ ಪಾತಾಳಕ್ಕಿಳಿಯುತ್ತಿದೆ. ಲಕ್ಷಗಟ್ಟಲೆ ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರು ಸರಕಾರದ ನೀತಿಗಳಿಂದಾಗಿ ಬವಣೆ ಪಡುತ್ತಿದ್ದ್ದಾರೆ. ಸರಕಾರದ ನೀತಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಬದಲಾಗಿ ತ್ರಿವಳಿ ತಲಾಖ್ ರದ್ದತಿ, 37ನೇ ವಿಧಿಯ ರದ್ದತಿ, ಅಸ್ಸಾಮಿನಲ್ಲಿ ಎನ್‌ಆರ್‌ಸಿಯಂತಹ ವಿಷಯಗಳಿಗೆ ಆದ್ಯತೆ ನೀಡಿದೆ. ಎನ್‌ಆರ್‌ಸಿಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುವುದೆಂಬ ಮಾತುಗಳೂ ಕೇಳಿಬರುತ್ತಿವೆ.

ಮೆರಿಕದ ಹ್ಯೂಸ್ಟನ್‌ಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಭಾರೀ ದೊಡ್ಡ ಸಭೆ ನಡೆಯಿತು. ಅಲ್ಲಿ ನೆರೆದ ಸುಮಾರು ಐವತ್ತು ಸಾವಿರ ಮಂದಿ ಇಬ್ಬರು ನಾಯಕರಿಗೂ ಜೈಕಾರ ಕೂಗಿದರು. ಈ ಇಬ್ಬರು ನಾಯಕರು ಪರಸ್ಪರ ಹೊಗಳಿದರು; ಮತ್ತು ‘ಇಸ್ಲಾಮಿಕ್ ಭಯೋತ್ಪಾದನೆ’ ಹಾಗೂ ಪಾಕಿಸ್ತಾನವನ್ನು ಟೀಕಿಸಿದರು. ಆದರೆ ‘ಇಸ್ಲಾಮಿಕ್ ಭಯೋತ್ಪಾದನೆ’ಯ ಹೆಸರಿನಲ್ಲಿ ಸೃಷ್ಟಿಸಲಾಗಿರುವ ಸಮೂಹ ಸನ್ನಿಯ ಬಗ್ಗೆ ಯಾರೂ ಜ್ಞಾಪಿಸಲಿಲ್ಲ. ನಿಜವಾಗಿ ಈ ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದು ಅಮೆರಿಕವೇ ಹೊರತು ಇನ್ಯಾರೂ ಅಲ್ಲ. ಮುಸ್ಲಿಂ ಯುವಕರ ಬ್ರೈನ್‌ವಾಶ್ ಮಾಡಲು ಬೇಕಾದ ಪಠ್ಯಕ್ರಮವನ್ನು ರೂಪಿಸಲು, ಅದನ್ನು ಬಳಸಿ ತನ್ನ ಕಾರ್ಯ ಸಾಧಿಸಿಕೊಳ್ಳಲು ಅಮೆರಿಕ 8,000 ಮಿಲಿಯ ಡಾಲರ್‌ನಷ್ಟು ಹಣ ಹಾಗೂ 7,000 ಟನ್‌ಗಳಷ್ಟು ಶಸ್ತ್ರಾಸ್ತ್ರಗಳನ್ನು ಬಳಸಿತು. ಅಫ್ಘಾನಿಸ್ಥಾನವನ್ನು ಆಕ್ರಮಿಸಿದ್ದ ರಶ್ಯನ್ ಸೇನೆಯ ವಿರುದ್ಧ ಹೋರಾಡಲಿಕ್ಕಾಗಿ ಈ ಮುಸ್ಲಿಂ ಯುವಕರನ್ನು ಸಜ್ಜುಗೊಳಿಸಲಾಗಿತ್ತು. ಆದರೆ ಈಗ ಮಾತ್ರ ಅಮೆರಿಕ ಇದೆಲ್ಲದರಿಂದ ತನ್ನ ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆ.

‘ಹೌಡಿ ಮೋದಿ’ ಸಮಾವೇಶದ ಹಲವು ಮುಖಗಳು ಜನರಿಗೆ ತಿಳಿದಿಲ್ಲ. ಮಾಧ್ಯಮಗಳು ಸಮಾವೇಶಕ್ಕೆ ಭಾರೀ ಪ್ರಚಾರ ನೀಡಿವೆ. ಆದರೆ ಮುಖ್ಯವಾದ ಒಂದು ವಿಷಯವನ್ನು ಅವುಗಳು ಮರೆಮಾಚಿವೆ: ಆ ಸಮಾರಂಭಕ್ಕೆ ವಿವಿಧ ತಂಡಗಳಿಂದ ವ್ಯಕ್ತವಾದ ಪ್ರತಿಭಟನೆಗಳು ಹಾಗೂ ಭಾರತದಲ್ಲಿ ಮೋದಿ ನೀತಿಗಳ ವಿರುದ್ಧ ವ್ಯಕ್ತವಾದ ಪ್ರತಿಭಟನೆಗಳನ್ನು ಮಾಧ್ಯಮಗಳು ಉಪೇಕ್ಷಿಸಿವೆ. ಡೆಮಾಕ್ರಟಿಕ್ ನಾಯಕ ಬರ್ನಿ ಸ್ಯಾಂಡರ್ಸ್ ಅಮೆರಿಕದಿಂದಲೇ ಟ್ವ್ವೀಟ್ ಮಾಡಿ, ಇಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಉಪೇಕ್ಷಿಸಿ ಟ್ರಂಪ್ ಮೋದಿಯವರ ನೀತಿಗಳನ್ನು ಅನುಮೋದಿಸುತ್ತಿರುವ ಬಗ್ಗೆ ಟೀಕಿಸಿದರು. ತನ್ನ ದೀರ್ಘ ಭಾಷಣದಲ್ಲಿ ‘‘ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ’’ ಎಂಬುದೇ ಮೋದಿಯವರ ಮುಖ್ಯ ಅಂಶವಾಗಿತ್ತು. ಕಾಶ್ಮೀರದಲ್ಲಿರುವವರು ಸೇರಿದಂತೆ ಬೃಹತ್ ಸಂಖ್ಯೆಯ ಭಾರತೀಯರ ಮೂಲಭೂತ ನಾಗರಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿರುವಾಗಲೇ ಮೋದಿ ಹಾಗೆ ಹೇಳಿದರು. ಪ್ರೇಕ್ಷಕರ ಒಂದು ದೊಡ್ಡ ಭಾಗವು ಮೋದಿಯವರು ಹೇಳಿದ್ದನ್ನೆಲ್ಲ ಆಲಿಸಿ ಬಾಯಿ ಚಪ್ಪರಿಸಿತಾದರೂ, ಸ್ಟೇಡಿಯಂನ ಹೊರಗೆ ಇದ್ದ ಪ್ರತಿಭಟನಾಕಾರರ ದೊಡ್ಡ ಸಮೂಹ ಮೋದಿ ಆಡಳಿತದಲ್ಲಿ ಭಾರತದ ನಿಜವಾದ ಸ್ಥಿತಿಯ ಕುರಿತು ವಿಶ್ವದ ಗಮನ ಸೆಳೆಯಿತು. ‘ಅಲಯನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಅಕೌಂಟೆಬಿಲಿಟಿ’ ಹಲವು ತಂಡಗಳ ಮೈತ್ರಿಕೂಟವು ಪ್ರತಿಭಟನಾಕಾರರ ಅತ್ಯಂತ ಅರ್ಥಪೂರ್ಣವಾದ ಹೇಳಿಕೆಯನ್ನು ದಾಖಲಿಸಿತು. ಈ ಮೈತ್ರಿಕೂಟದ ಸುನೀತಾ ವಿಶ್ವನಾಥನ್ ‘ಹಿಂದೂಸ್ ಫಾರ್ ಹ್ಯುಮನ್ ರೈಟ್ಸ್’ ಸಂಘಟನೆಯ ಸದಸ್ಯೆಯಾಗಿ ಹೀಗೆ ಹೇಳಿದರು: ‘‘ವಸುದೈವ ಕುಟುಂಬಕಂ (ಇಡೀ ವಿಶ್ವವೇ ನನ್ನ ಕುಟುಂಬ) ಎಂಬುದನ್ನು ಬೋಧಿಸುವ ನನ್ನ ಧರ್ಮವನ್ನು ತೀವ್ರಗಾಮಿಗಳು ಮತ್ತು ರಾಷ್ಟ್ರೀಯವಾದಿಗಳು ಹೈಜಾಕ್ ಮಾಡುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ. ಇವರು ಮುಸ್ಲಿಮರನ್ನು ಗುಂಪು ಥಳಿತಕ್ಕೆ ಗುರಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ತುಳಿಯುತ್ತಿದ್ದಾರೆ ಮತ್ತು ಇದರ ವಿರುದ್ಧ ಮಾತನಾಡುವವರನ್ನು ಕೊಲೆ ಮಾಡದಿದ್ದರೂ, ಬಂಧಿಸುತ್ತಿದ್ದಾರೆ. ಅತ್ಯಂತ ಇತ್ತೀಚಿನ ಕಾಶ್ಮೀರಿ ಜನತೆಯ ಕರಾಳ ಸ್ಥಿತಿ ಮತ್ತು ನಾಗರಿಕರ ರಾಷ್ಟ್ರೀಯ ಪೌರತ್ವ ಎಂದು ಕರೆಯಲಾಗಿರುವ ಒಂದು ವಿಕೃತಿಯ ಹೇರಿಕೆಯಿಂದಾಗಿ ಭಾರತದಲ್ಲಿ ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿರುವ ಒಂದು 1.9 ಮಿಲಿಯ ಜನರ ಪರಿಸ್ಥಿತಿ ವಿಶೇಷವಾಗಿ ನಮಗೆ ಆಘಾತ ಉಂಟು ಮಾಡಿದೆ’’

 ಭಾರತವು ಈಗ ವಿಶೇಷವಾಗಿ ಕಳೆದ ಎರಡು ವರ್ಷಗಳಿಂದ ಒಂದು ರಾಷ್ಟ್ರವಾಗಿ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ಅಮೆರಿಕದಲ್ಲಿ ನಮ್ಮ ಪ್ರಧಾನಿಯವರು ಸಂಭ್ರಮದಿಂದ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವಾಗ ಭಾರತದ ಆರ್ಥಿಕತೆ ಪಾತಾಳಕ್ಕಿಳಿಯುತ್ತಿದೆ. ಲಕ್ಷಗಟ್ಟಲೆ ನೌಕರರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರು ಸರಕಾರದ ನೀತಿಗಳಿಂದಾಗಿ ಬವಣೆ ಪಡುತ್ತಿದ್ದ್ದಾರೆ. ಸರಕಾರದ ನೀತಿಗಳು ಜನರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಬದಲಾಗಿ ತ್ರಿವಳಿ ತಲಾಖ್ ರದ್ದತಿ, 37ನೇ ವಿಧಿಯ ರದ್ದತಿ, ಅಸ್ಸಾಮಿನಲ್ಲಿ ಎನ್‌ಆರ್‌ಸಿಯಂತಹ ವಿಷಯಗಳಿಗೆ ಆದ್ಯತೆ ನೀಡಿದೆ. ಎನ್‌ಆರ್‌ಸಿಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುವುದೆಂಬ ಮಾತುಗಳೂ ಕೇಳಿಬರುತ್ತಿವೆ.

 ಸರಕಾರದ ಕಾಳಜಿಗಳಲ್ಲಿ ಮತ್ತು ನೀತಿ ನಿರೂಪಣೆಗಳಲ್ಲಿ ಭಾರೀ ಬದಲಾವಣೆ ಕಾಣಿಸುತ್ತಿದೆ. ಜನರ ಬದುಕಿಗೆ ಸಂಬಂಧಿಸಿದ ವಿಷಯಗಳ ಮೇಲೆ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರದ ವರ್ಷಗಳಲ್ಲಿ ಸರಕಾರಗಳ ಗಮನ ಕೇಂದ್ರಿತವಾಗಿತ್ತು. ಉದ್ಯಮಗಳು, ವಿಶ್ವವಿದ್ಯಾನಿಲಯಗಳು ಹಾಗೂ ನೀರಾವರಿ ಯೋಜನೆಗಳಿಗೆ ಬೇಕಾದ ಭದ್ರ ಬುನಾದಿಯನ್ನು ಹಾಕಲಾಯಿತು. ಈ ಎಲ್ಲ ಯೋಜನೆಗಳ ಅನುಷ್ಠಾನದಲ್ಲಿ ಹಲವು ದೌರ್ಬಲ್ಯಗಳಿದ್ದವು. ಆದರೆ ದೇಶವು ಸಾಗಬೇಕಾದ ದಿಕ್ಕು ಸರಿಯಾಗಿಯೇ ಇತ್ತು. ಪರಿಣಾಮವಾಗಿ ಸಾಕ್ಷರತೆಯ ಮಟ್ಟಗಳು, ಆರೋಗ್ಯ ಸಂಬಂಧಿ ಸೂಚ್ಯಂಕಗಳು, ಆರ್ಥಿಕ ಬೆಳವಣಿಗೆ, ಕೃಷಿ ಉತ್ಪನ್ನ ಇತ್ಯಾದಿ ರಂಗಗಳಲ್ಲಿ ಸಾಕಷ್ಟು ್ರಗತಿ ಸಾಧ್ಯವಾಯಿತು.

ರಾಮಮಂದಿರ, ಗೋಮಾಂಸ, ಮತಾಂತರ, ಲವ್ ಜಿಹಾದ್‌ನಂತಹ ಅಸ್ಮಿತೆಯ ವಿಷಯಗಳು ಆಗ ಅಮುಖ್ಯವಾಗಿದ್ದವು. ಆದರೆ ಈಗ ಇವುಗಳೇ ಮುಖ್ಯವಾಗಿ ಸರಕಾರದ ನೀತಿಯ ಮೇಲೆ ಪ್ರಭಾವ ಬೀರುತ್ತಾ ರಾಷ್ಟ್ರ ಸಾಗುವ ದಿಕ್ಕೇ ಬದಲಾಗಿದೆ. ಜನರ ಮೂಲಭೂತ ಸಮಸ್ಯೆಗಳಿಂದ ದೇಶದ ಗಮನವನ್ನು ಭಾವನಾತ್ಮಕ ವಿಷಯಗಳ ಕಡೆಗೆ ಸೆಳೆಯಲಾಗಿದೆ. ರಾಮ ಮಂದಿರ ಚಳವಳಿಯ ಬಳಿಕ ಬಿಜೆಪಿ ತಾನು ‘ಇತರ ಪಕ್ಷಗಳಿಗಿಂತ ಭಿನ್ನವಾದ ಪಕ್ಷ’ ಎಂದು ಹೇಳಿಕೊಳ್ಳುತ್ತಿದೆ ನಿಜ, ಅದು ಹಿಂದೂ ರಾಷ್ಟ್ರೀಯವಾದಿ ಕಾರ್ಯಸೂಚಿಯ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಒಂದು ಭಿನ್ನ ಪಕ್ಷವಾಗಿದೆ. ಅಂತಹ ಧಾರ್ಮಿಕ ರಾಷ್ಟ್ರೀಯತೆಯು ಅಸ್ಮಿತೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ದ್ವೇಷವನ್ನು ಆಧರಿಸಿ ಪ್ರಬಲವಾಗುತ್ತದೆ. ಈ ಧ್ರುವೀಕರಣವೇ ಜಗತ್ತಿನಾದ್ಯಂತ ಧಾರ್ಮಿಕ ರಾಷ್ಟ್ರೀಯವಾದಿ ಪಕ್ಷಗಳಿಗೆ ಚುನಾವಣಾ ಶಕ್ತಿ ನೀಡುವ ವಿಷಯವಾಗಿದೆ. ಭಾರತದಲ್ಲಿ ಬಿಜೆಪಿ ಈ ರೀತಿಯಲ್ಲೇ ಶಕ್ತಿ ಪಡೆದಿದೆ. ‘ಹೌಡಿ ಮೋದಿ’ಯಂತಹ ಘಟನೆಗಳು ಸೃಷ್ಟಿಸಿರುವ ಸಮೂಹ ಸನ್ನಿಯ ಸಂದರ್ಭದಲ್ಲಿ ಸಮಾಜದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳತ್ತ ರಾಷ್ಟ್ರೀಯ ಗಮನವನ್ನು ಹೇಗೆ ಮರಳಿಸುವುದು? ಎಂಬುದೇ ನ್ಮುನ್ನು ಕಾಡುವ ಸಮಸ್ಯೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)