varthabharthi

ಗಲ್ಫ್ ಸುದ್ದಿ

ಕೆಸಿಎಫ್ ಶರಫಿಯ್ಯಾದಲ್ಲಿ ಹೆಚ್.ವಿ.ಸಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ

ವಾರ್ತಾ ಭಾರತಿ : 30 Sep, 2019

ಜಿದ್ದಾ: ಕೆಸಿಎಫ್‌ ಶರಫಿಯ್ಯಾ ಸೆಕ್ಟರ್ ಮಾಸಿಕ ಆತ್ಮೀಯ ಮಜ್ಲಿಸ್ ಹಾಗೂ ಹಜ್ಜ್ ಸ್ವಯಂಸೇವಕರಿಗೆ ಅಭಿನಂದನಾ ಸಮಾರಂಭ ಇಲ್ಲಿಯ ಕೆಸಿಎಫ್ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಸಯ್ಯಿದ್ ಝಕರಿಯ್ಯಾ ಸಖಾಫಿ ತಂಙಳ್ ನಾವುಂದ ನೇತೃತ್ವದಲ್ಲಿ ಆತ್ಮೀಯ ಮಜ್ಲಿಸ್ ಹಾಗೂ ದುಆಃ ಕಾರ್ಯಕ್ರಮ ನಡೆಯಿತು. ಬಳಿಕ ಕೆಸಿಎಫ್ ಶರಫಿಯ್ಯಾ ಸೆಕ್ಟರ್ ಅಧ್ಯಕ್ಷ ಜಹಫರ್ ಸಖಾಫಿ ಕರಾಯ ಉಸ್ತಾದರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಿತು. ಸಭೆಯನ್ನು ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಹಾಜಿ ಕಲ್ಲರ್ಬೆ ಉದ್ಘಾಟಿಸಿರು.

ಕೆಸಿಎಫ್ ಜಿದ್ದಾ ಝೋನ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಕಿನ್ಯ ರವರು ಮುನ್ನುಡಿ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸತತ 4 ವರುಷಗಳಿಂದ ಹಜ್ಜಾಜಿಗಳ ಸೇವೆ ಮಾಡುತ್ತಾ ಟೀಂ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಿದ್ದ ಸಯ್ಯಿದ್ ಝಕರಿಯ್ಯಾ ಸಖಾಫಿ ತಂಙಳ್ ರವರನ್ನು ಈ ಸಮಾರಂಭದಲ್ಲಿ ಸನ್ಮಾನ ಮಾಡಲಾಯಿತು. ಬಳಿಕ ಸೌದಿ ರಾಷ್ಟ್ರೀಯ ಸಮಿತಿಯಿಂದ ನೀಡಲಾಗುವ ಪ್ರಮಾಣ ಪತ್ರವನ್ನು ಎಲ್ಲಾ ಸ್ವಯಂ ಸೇವಕರಿಗೆ ನೀಡಿ ಅಭಿನಂದಿಸಲಾಯಿತು. ಸ್ವಯಂ ಸೇವಕರಾದ ಅಬ್ಬಾಸ್ ಹಾಜಿ ಕುಕ್ಕಾಜೆ, ಆದಂ ಹಾಜಿ ಗೂಡಿನಬಳಿ, ಹಸನ್ ಜಾಫರ್ ಉಳ್ಳಾಲ, ಸಿರಾಜ್ ಗುಲ್ಬರ್ಗ ರವರು ಮೀನಾದಲ್ಲಿ ಹಜ್ಜಾಜಿಗಳೊಂದಿಗಿನ ಸೇವೆಯ ಅನುಭವನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.

ಸಭೆಯಲ್ಲಿ ಸಯ್ಯಿದ್ ಅಬ್ದುರಹ್ಮಾನ್ ಅಲ್ ಬುಖಾರಿ ಉಚ್ಚಿಲ ತಂಙಳ್, ಸಯ್ಯಿದ್ ನಾಫೀ ತಂಙಳ್ ನೂಜಿ, ಅಬ್ದುಲ್ ಹಮೀದ್ ಫೈಝಿ ಪುಂಜಾಲಕಟ್ಟೆ, ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಸದಸ್ಯರುಗಳಾದ ಸಲಾಂ ಎಣ್ಮೂರು, ಸಿದ್ದೀಕ್ ಹಾಜಿ ಬಾಳೆಹೊನ್ನೂರು, ಕೆಸಿಎಫ್ ಜಿದ್ದಾ ಝೋನ್ ನೇತಾರರಾದ ಇಯಾಸ್ ಸಅದಿ ಉಳ್ಳಾಲ, ಸುಲೈಮಾನ್ ಹಾಜಿ ಬಂಡಾಡಿ, ಶಾಹುಲ್ ಹಮೀದ್ ಹಾಜಿ ಸಾಗರ್, ಕೆಸಿಎಫ್ ಬವಾದಿ ಸೆಕ್ಟರ್ ಅಧ್ಯಕ್ಷರಾದ ಮಹ್ರೂಫ್ ಮದನಿ ಸಾಂಬಾರ್ ತೋಟ, ಶಂಸುದ್ದೀನ್ ಮಡಂತ್ಯಾರ್ ಸೇರಿದಂತೆ ಇತರ ಸುನ್ನೀ ಸ್ಥಾಪನೆಗಳ ನೇತಾರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ನಾಸೀರುದ್ದೀನ್ ಹೆಚ್ಕಲ್ ರವರು ಸ್ವಾಗತಿಸಿ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)