varthabharthi

ಗಲ್ಫ್ ಸುದ್ದಿ

ಕೆಸಿಎಫ್ ಒಮಾನ್ ನಿಜ್ವಾ ಝೋನ್ ವತಿಯಿಂದ ಮೆಡಿಕಲ್ ಕ್ಯಾಂಪ್

ವಾರ್ತಾ ಭಾರತಿ : 30 Sep, 2019

ಮಸ್ಕತ್: ಕೆಸಿಎಫ್ ಒಮಾನ್ ನಿಜ್ವಾ ಝೋನ್ ಹಾಗೂ ಬದ್ರ್ ಅಲ್ ಸಮಾ ಹಾಸ್ಪಿಟಲ್ ನಿಝ್ವ ಇದರ ಅಧೀನದಲ್ಲಿ ಮೆಡಿಕಲ್ ಕ್ಯಾಂಪ್ ಹಾಗೂ ಒಮಾನ್ ಕೆಸಿಎಫ್ ಅಂತಾರಾಷ್ಟ್ರಿಯ ನಾಯಕರಿಗೆ ಸ್ವೀಕರಣಾ ಕಾರ್ಯಕ್ರಮ ಇತ್ತೀಚೆಗೆ ನಿಜ್ವಾ ಲುಲು ಹೈಪರ್ ರ್ಮಾರ್ಕೆಟ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸಿಂ ಹಾಜಿ ಅಳಕೆಮಜಲ್ ವಹಿಸಿದ್ದರು. ಅಬ್ದುರ್ರಹ್ಮಾನ್ ಕೋಡಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಉಮರ್ ಸಖಾಫಿ ಮಿತ್ತೂರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಗೆ ಆಯ್ಕೆಯಾದ ಉಮರ್ ಸಖಾಫಿ ಮಿತ್ತೂರು, ಕೆಸಿಎಫ್ ಒಮಾನ್ ಅಧ್ಯಕ್ಷ ಅಯ್ಯೂಬ್ ಕೋಡಿ, ಪವಿತ್ರ ಹಜ್ಜ್ ಕರ್ಮ ಮುಗಿಸಿ ಬಂದ ಕಾರ್ಯದರ್ಶಿ ಸಾದಿಕ್ ಸುಳ್ಯ, ಬದರ್ ಅಲ್ ಸಮಾದ ಡಾ.ದಾಮೋದರ್ ಪ್ರಭು, ಡಾ.ವೆಂಕಟೇಶ್ ಕುಮಾರ್, ಡಾ.ಮಕರಂದ್ ಜೌರಿಕರ್, ಬದರ್ ಅಲ್ ಸಮಾ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀಜಿತ್, ಸಾಬು ಖಾನ್ ಹಬೀಬ್, ಲುಲು Gm ಮುಹಮ್ಮದ್ ನವಾಬ್ ಅಲ್ ಖರೋಸಿ ಗ್ರೂಪ್ಸ್ ಡಿಸೈನರ್ ರೋಷ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಸ್ವದೇಶಕ್ಕೆ ಮರಳುತ್ತಿರುವ ದಾರುಲ್ ಇರ್ಷಾದ್ ಮಾಣಿ ರಿಸೀವರ್ ಅಬ್ದುಲ್ ರಹ್ಮಾನ್ ಕೋಡಿ ಅವರಿಗೆ ಕೆಸಿಎಫ್ ಒಮಾನ್ ಸಮಿತಿ ವತಿಯಿಂದ ಸಹಾಯ ಧನವನ್ನು ನೀಡಲಾಯಿತು.

300ಕ್ಕೂ ಹೆಚ್ಚು ಮಂದಿ ಮೆಡಿಕಲ್ ಕ್ಯಾಂಪ್ ನ ಉಪಯೋಗ ಪಡೆದುಕೊಂಡರು. ಡಾ.ದಾಮೋದರ್ ಪ್ರಭು ರವರನ್ನು ಆಬಿದ್ ತಂಙಲ್ ರವರು ಗಲ್ಫ್ ಇಶಾರ ಚಂದಾದಾರರನ್ನಾಗಿ ಮಾಡುವ ಮೂಲಕ ಗಲ್ಫ್ ಇಶಾರಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಂದರ್ ಬಾಷಾ ತೀರ್ಥಹಳ್ಳಿ, ಸಾದಿಕ್ ಕೈಕಂಬ, ಇಬ್ರಾಹಿಂ ಮಣಿಪುರ, ಸಿದ್ದೀಕ್ ಉಳ್ಳಾಲ, ಹುಸೈನ್ ತೀರ್ಥಹಳ್ಳಿ, ಹಮೀದ್ ಕಣ್ಣಂಗಾರ್,ರಮೀಜ್ ಕಟಪಾಡಿ, ವಾರಿಸ್ ಮಣಿಪುರ, ಆರಿಫ್ ಮಣಿಪುರ, ರಉಫ್ ಕೆ.ಸಿ.ರೋಡ್, ಮುಸ್ತಫಾ ಮಲ್ಲೂರ್, ಫಯಾಝ್ ಮಲ್ಲೂರ್, ಬದ್ರುದ್ದೀನ್ ಶಕೀರ್, ಬಶೀರ್ ಮಣಿಪುರ, ಆಸಿಫ್ ಕಣ್ಣಂಗಾರ್, ಶಂಶುದ್ದೀನ್ ಉಜಿರೆ, ಫೈಝಲ್ ಕಣ್ಣಂಗಾರ್, ಲತೀಫ್ ಸುಳ್ಯ, ಅಸ್ಲಮ್ ಕುದ್ರೋಳಿ, ಹಸನ್ ಪರಂಗಿಪೇಟೆ, ಅಬ್ಬಾಸ್ ಮರಕ್ಕಡ,  ತೌಫೀಕ್ ಕೈಕಂಬ, ಇಮ್ರಾನ್ ಹಾಗೂ ಒಮಾನ್ ನ್ಯಾಷನಲ್ ಸಮಿತಿ, ಮಸ್ಕತ್ ಝೋನ್, ಬೌಶರ್ ಝೋನ್, ಸೀಬ್ ಝೋನ್ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಬೀರ್ ಮಿಸ್ಬಾಹಿ ಸ್ವಾಗತಿಸಿ, ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)