varthabharthi

ನಿಧನ

ತಿಮ್ಮಕ್ಕ ಹೆಗಡೆ

ವಾರ್ತಾ ಭಾರತಿ : 2 Oct, 2019

 ಉಡುಪಿ, ಅ.2: ಹೊನ್ನಾವರ ತಾಲೂಕಿನ ಕವಲಕ್ಕಿಯ ಮಹಾಬಲೇಶ್ವರ ಶಿವ ಹೆಗಡೆ ಅವರ ಧರ್ಮಪತ್ನಿ ತಿಮ್ಮಕ್ಕ ಹೆಗಡೆ(96) ಅ.1ರಂದು ಸಂಜೆ 5:30ಕ್ಕೆ ನಿಧನರಾಗಿದ್ದಾರೆ. ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ಇವರು ಸ್ವಾವಲಂಬಿಯಾಗಿ ಬದುಕಿದ್ದರು ಮತ್ತು ಎಲ್ಲರಿಗೂ ಸ್ವಾವಲಂಬಿ ಜೀವನ ನಡೆಸುವ ಬ್ಗೆ ಮಾರ್ಗದರ್ಶನ ನೀಡುತ್ತಿದ್ದರು.

ಇವರು ಯಕ್ಷಗಾನ ಕಲಾರಂಗದ ಜೊತೆ ಕಾರ್ಯದರ್ಶಿ ಪ್ರೊ.ಎಂ. ನಾರಾಯಣ ಹೆಗಡೆ ಸೇರಿದಂತೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿ ಯರನ್ನು ಅಗಲಿದ್ದಾರೆ. ಅಗಲಿದ ಚೇತನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)